ನಮ್ಮ ಮನೆಯ ಕೈದೋಟದಲ್ಲಿ ಬುಲ್ ಬುಲ್ ಪಕ್ಷಿ ಗೂಡ ಕಟ್ಟಿ ಮರಿಮಾಡಿತ್ತು. ಸುಮಾರು ಒಂದು ತಿಂಗಳಕ್ಕೂ ಹೆಚ್ಚು ಕಾಲ ಇದರ ಪೋಟೋ ತೆಗೆಯುವ ಕಾರ್ಯ ನೆಡೆಯಿತು. ದಿನ ಬೆಳಗಾಗದರೆ , ಪಕ್ಷಿಗಳು ಏನಾಗಿದಯೋ ಏನೋ ಎಂದು ಗೂಡಿನ ಬಳಿ ಹೋಗಿ ನೋಡುವ ನಮ್ಮ ದಿನಚರಿಯ ಅನುಭವಗಳನ್ನು ಸಾಕ್ಷ್ಯಚಿತ್ರದಲ್ಲಿ ತರುವ ಪ್ರಯತ್ನ ಮಾಡಿದ್ದೇವೆ. ಇದನ್ನು ಕತೆಯಾಗಿಸಿ ಬರಹ ರೂಪ ನೀಡಿ, ಸಾಕ್ಷ್ಯಚಿತ್ರವನ್ನು ಸಿದ್ಧಪಡಿಸಿದವರು ನಿರಂಜನ್.