ಮಿತಭಾಷಿಯಾದ, ಯಾರೊಂದಿಗೂ ಹೆಚ್ಚಿಗೆ ಬೆರೆಯದ ಸದಾ ಆಲೋಚನೆಯಲ್ಲಿ ಮುಳುಗಿರುವ ಗಂಡ. ಹೆಂಡತಿಯ ಸ್ವಭಾವ ವಿರುದ್ದವಾದುದ್ದು. ಅವನ ಸ್ವಭಾವವನ್ನು ಬದಲಿಸು ಪ್ರಯತ್ನಿಸಿ ಸಾಧ್ಯವಾಗದೇ ಅವಳೇ ಇವನ ಸ್ವಭಾವಕ್ಕೆ ಹೊಂದಿಕೊಳ್ಳುತ್ತಾಳೆ. ಆದರೆ ಇದೇ ಕಷ್ಟವಾಗುವುದು. ಮನಬಿಚ್ಚಿ ಮಾತನಾಡಲು ಸಾಧ್ಯವಿಲ್ಲದ ಸ್ಥಿತಿಯಲ್ಲಿ ಇರಲು ಅಸಾಧ್ಯವಾಗಿ ಮತ್ತೆ ಕೆಲಸಕ್ಕೆ ಸೇರುತ್ತಾಳೆ. ಅಲ್ಲಿ ಒಬ್ಬನ ಪರಿಚಯ, ಸ್ನೇಹ ಇವಳಲ್ಲಿ ಹೊಸ ಬದಲಾವಣೆಗಳನ್ನು ತರುತ್ತದೆ. ಅವನ ಗುಂಗಲ್ಲೇ ಮುಳುಗಿ ಹೋದ ಹೆಂಡತಿ ಗಂಡನನ್ನು ಮರೆಯುತ್ತಾಳಾ? ಹೊಸ ಪರಿಚಯ ಯಾವ ಮಟ್ಟಕ್ಕೆ ಬಂದು ನಿಲ್ಲುತ್ತದೆ? ಹೆಂಡತಿಯ ಬದಲಾವಣೆ ಗಂಡನಿಗರಿವಾಯಿತೇ? ನಿರ್ಲಿಪ್ತ ಗಂಡನ ಬದುಕಲ್ಲಿ ಹೆಂಡತಿಗೆ ಹೊಸ ಬೆಳಕು ಬಂದಿದೆ?
ಇದಕ್ಕೆ ಉತ್ತರ ಬೆಳಕು ಕತೆ. ಪ್ರತಿಭಾ ನಂದಕುಮಾರ ಬದುಕಿನಲ್ಲಿ ಅದರಲ್ಲೂ ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ, ಸ್ವಭಾವಗಳ ಬದಲಾವಣೆಗಳ ಪಾತ್ರವನ್ನು ಈ ಚಿಕ್ಕ ಕತೆಯಲ್ಲಿ ಮಾರ್ಮಿಕ ಬರೆದಿದ್ದಾರೆ.