ಅರಕಲಗೂಡು ನರಸಿಂಗರಾಯ ಕೃಷ್ಣರಾಯ (ಅ ನ ಕೃ) ಕನ್ನಡ ಸಾಹಿತ್ಯಲೋಕದ ಪ್ರಮುಖರಲ್ಲೊಬ್ಬರು. ಇವರು ಕಾದಂಬರಿ ಸಾರ್ವಭೌಮ ಎಂದೇ ಖ್ಯಾತರಾಗಿದ್ದರು. ಅನಕೃ ಹುಟ್ಟಿದ್ದು ಹಾಸನ ಜಿಲ್ಲೆಯ
ಅರಕಲಗೂಡು.ಅನಕೃ ಅವರಿಗೆ ಬರವಣಿಗೆಯೇ ಜೀವನೋಪಾಯವಾಗಿತ್ತು. ಅವರು ರಚಿಸಿರುವ ಸಾಹಿತ್ಯ ೮೦,೦೦೦ ಪುಟಗಳಿಗೂ ಅಧಿಕ. ಅದರಲ್ಲಿ ಕಾದಂಬರಿಗಳು ೧೧೦, ೧೫ ನಾಟಕಗಳು, ೮ ಕಥಾ
ಸಂಕಲನಗಳು, ಕಲೆ,ಸಾಹಿತ್ಯ ವಿಮರ್ಶೆಗೆ ಸಂಬಂಧಿಸಿದ ಇಪ್ಪತ್ತು ಪುಸ್ತಕಗಳು, ೮ ಜೀವನ ಚರಿತ್ರೆಗಳು, ೩ ಅನುವಾದ, ೧೨ ಸಂಪಾದಿತ ಕೃತಿಗಳು, ಅಲ್ಲದೆ ಪ್ರಬಂಧ,ಹರಟೆಗಳೂ ಸೇರಿವೆ. ೧೯೩೪-೧೯೬೪ ರ
ಅವಧಿಯಲ್ಲಿ ೧೦೦ ಕಾದಂಬರಿಗಳನ್ನು ರಚಿಸಿರುವ , ಅನಕೃ ಅವರ ಮೊದಲನೆಯ ಕಾದಂಬರಿ ಜೀವನ ಯಾತ್ರೆ, ನೂರನೆಯ ಕಾದಂಬರಿ ಗರುಡ ಮಚ್ಚೆ.
ಕಾದಂಬರಿಗಳು, ಕಥಾಸಂಕಲನಗಳು ಅನುವಾದಿತ ಗ್ರಂಥಗಳು, ಜೀವನ ಚರಿತ್ರೆಗಳು, ಸಂಪಾದಿತ ಪತ್ರಿಕೆಗಳು, ನಾಟಕಗಳು, ಸಂಪಾದಿತ ಗ್ರಂಥಗಳು, ಪ್ರಬಂಧ ವಿಮರ್ಶೆಗಳು. "ಅನಕೃ ಒಂದು ಜೀವಮಾನದಲ್ಲಿ ಮಾಡಿದ್ದು
ನೂರು ಜೀವಮಾನಗಳ ಕೆಲಸ" - ನಿರಂಜನ
ಓದಿರುವ ಕತೆಗಳು: