ಪ್ರತಿ ನಿತ್ಯವು ಊರಜನರಿಗೆ ತನ್ನ ಕಲ್ಪನೆಯಿಂದ ಅದ್ಭುತ ಕತೆಗಳನ್ನು ಹೇಳುತ್ತಾ ಬಂದಿದ್ದ ಕತೆಗಾರ ಹಿಂದಿನ ಜನಗಳಂತೆ, ತನ್ನ ದೈಹಿಕ ಆಯುಷ್ಯನ್ನು ಲೆಕ್ಕವಿಡದೇ ಅದರ ಬಗ್ಗೆ ತಲೆಕೆಡೆಸಿಕೊಳ್ಳದೇ ಇದ್ದವನು. ಕತೆ ಹೇಳುವುದರಲ್ಲೇ ತನ್ನ ಜೀವನವನ್ನು ಸವೆಸುತ್ತಿದ್ದ ವ್ಯಕ್ತಿಗೆ ಇದ್ದಕ್ಕಿದ್ದಂತೆ ಸತ್ಯದ ಅರಿವಾಗುತ್ತದೆ. ಅದರ ಪರಿಣಾಮ ಮತ್ತು ಕತೆಗಾರನ ಜೀವನವನ್ನು ಆರ್.ಕೆ.ನಾರಾಯಣ್ ರವರು ಇದರಲ್ಲಿ ತಿಳಿಸಿದ್ದಾರೆ.