ಮಧ್ಯಮ ಕುಟುಂಬದ ತೊಳಲಾಟಗಳು, ಪರದಾಟಗಳನ್ನು, ಅದಕ್ಕೆ ಅನಿರೀಕ್ಷಿತವಾಗಿ ಬಂದ ಪರಿಹಾರಗಳನ್ನು ಸ್ವೀಕರಿಸುವ ಮನೋಧರ್ಮವನ್ನು ಸೊಗಸಾಗಿ ಚಿತ್ರಿಸಿದ್ದಾರೆ. ಮನೆಯಲ್ಲಿ ತನ್ನ ಮಾತನ್ನು ಯಾರೂ ಪರಿಗಣಿಸದೇ ಇದ್ದಾಗ, ತನ್ನ ಆಸೆಯನ್ನು ಹೇಗಾದರೂ ಈಡೇರಿಸಿಕೊಳ್ಳ ಬಯಸಿದ, ಮನೆಯ ಗೃಹಿಣಿಗೆ ನೆರವಾಗುವುದು ಸತ್ತು ಸ್ವರ್ಗ ಸೇರಿದ್ದ, ಆ ಮನೆಯ ಹಿರಿಯ ಅಜ್ಜಿ ಶೇಷಜ್ಜಿ. ಅಜ್ಜಿ ಹೇಗೆ ಬಂದಳು? ಏನು ಸಹಾಯ ಮಾಡಿದಳು? ಅವಳು ಕೊಟ್ಟ ಪರಿಹಾರಗಳೇನು? ಎಂಬುದಕ್ಕೆ ಉತ್ತರ ಈ ಕತೆಯಲ್ಲಿದೆ.