ನಮ್ಮ ಸುತ್ತಮುತ್ತ ಒಂದಲ್ಲಾ ಒಂದು ಸನ್ನಿವೇಶದಲ್ಲಿ ಮೋಸ, ಅನಾಚಾರ, ಕಳ್ಳತನ, ಸುಳ್ಳುಗಾರಿಗೆ, ಸುಲಿಗೆ, ದರೋಡೆಗಳನ್ನು ನೋಡುತ್ತಿರುತ್ತೇವೆ. ಇತ್ತಿಚಿನ ಪ್ರಪಚಂಚದಲ್ಲಿ ಇದು ಸರ್ವೇಸಾಮಾನ್ಯವಾಗಿದ್ದು, ಅದರ ವಿರುದ್ಧ ಪ್ರತಿಭಟನೆ, ಅವಿರೋಧಗಳು ಕೂಡ ಕಡಿಮೆಯಾಗುತ್ತಿವೆ. ಮೌನಂ ಸಮ್ಮತಿ ಲಕ್ಷಣಂ ಎನ್ನುವಂತೆ ಇದನ್ನು ನೋಡಿಯೂ ನಾವು ಸಮ್ಮನಾಗುವುದು ಸರ್ವೆಸಾಮಾನ್ನ. ಆದರೆ ಇದೆಲ್ಲ ತಪ್ಪು ಇವುಗಳನ್ನು ಮಾಡಬಾರದೆಂದು ನಿಚ್ಚಯಿಸಿರುವ ಮನಕ್ಕೆ ಬಹಿರಂಗವಾಗಿ ಇವುಗಳನ್ನು ತೊಡೆದು ಹಾಕಲು ಸಾಧ್ಯವಾಗದಿದ್ದಾಗ ಮಾನಸಿಕವಾಗಿ ಕೊರಗಲಾರಂಭಿಸುತ್ತದೆ. ಇನ್ನು ಮಕ್ಕಳ ಮುಗ್ಧ ಮನಸ್ಸಿನ ಮೇಲೆ ಇಂತಹ ಅಘಾತಗಳಾದರೆ ಏನಾಗಬಹುದು? ರಾಮಸ್ವಾಮಿಯವರು ಬರೆದಿರುವ ಈ ಕತೆಯೂ ಕೂಡ ಮುಗ್ಧ ಮನಸ್ಸಿಗೆ ಆದ ಆಘಾತದ ಘಟನೆಯನ್ನು ತಿಳಿಸುತ್ತದೆ.