ಕುವೆಂಪುರವರು ಬರೆದಿರುವ "ಸನ್ಯಾಸಿ ಮತ್ತು ಇತರ ಕತೆಗಳು" ಎಂಬ ಪುಸ್ತಕದಿಂದ ಈ ಕತೆಯನ್ನು ಆಯ್ಕೆಮಾಡಿಕೊಳ್ಳಲಾಗಿದೆ. ಸಾಮಾನ್ಯವಾಗಿ ನಾವು ಚಿಕ್ಕವರಿರುವಾಗ ಅನೇಕ ಚಿಕ್ಕ ಪುಟ್ಟ ಪ್ರತಿಜ್ಞೆಗಳನ್ನು ಮಾಡಿರುತ್ತೇವೆ. 'ನಾನು ಇನ್ನು ಮುಂದೆ ಮಾಂಸಹಾರವನ್ನು ಸೇವಿಸುವುದಿಲ್ಲ, ನಾನು ಸಾಯುವವರೆಗೆ ಅವನನ್ನು ಮಾತನಾಡಿಸುವುದಿಲ್ಲ............. ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಈಗ ನೆನಪಿಸಿಕೊಂಡರೆ ಅದು ಯಾವುದು ೧ ವರ್ಷ ಅಥವಾ ೨ ವರ್ಷಕ್ಕಿಂತ ಜಾಸ್ತಿ ಪಾಲನೆಯಾಗಿಲ್ಲ. ಈ ಕತೆಯಲ್ಲಿ ಬರುವ ಲೇಖಕರ ಸ್ನೇಹಿತರು ತಾವು ಮಾಡಿದ ಪ್ರತಿಜ್ಞೆಯನ್ನು ಪಾಲಿಸಿರುವ, ಮತ್ತು ಪ್ರತಿಜ್ಞೆಯ ಕಾರಣವನ್ನು ತಿಳಿಸುವ ತಮಾಷೆಯಿಂದ ಕೂಡಿದ, ಚಿಕ್ಕ ವಿಷಯವಾದರೂ ಆದರ್ಶಪೂರಿತ ಕತೆಯಾಗಿದೆ.