ಸಾಮಾನ್ಯವಾಗಿ ಚಿಕ್ಕವರವರೆಗೆ ನಾಯಿ ಸಾಕುವುದೆಂದರೆ ಇಷ್ಟವಾಗುತ್ತದೆ. ಬೆಂಗಳೂರಂಥ ನಗರಗಳಲ್ಲಿ ದೊಡ್ಡವರಿಗೆ ಅದರ ಪಾಲನೆ ಸ್ವಲ್ಪ ಕಷ್ಟವಾಗಬಹುದು. ಆದರೆ ಒಮ್ಮೆ ಅದರ ಒಡನಾಡ ಪ್ರಾರಂಭವಾದರೆ, ಅದು ಕೂಡ ನಮ್ಮ ಕುಟುಂಬದ ಒಬ್ಬ ಸದಸ್ಯನಾಗಿ ನಮ್ಮ ಎಲ್ಲಾ ಸುಖ ದು:ಖಗಳಲ್ಲಿ ಭಾಗಿಯಾಗುತ್ತದೆ ಎಂಬುದಕ್ಕೆ ಉದಾಹರಣೆಯಾಗಿ ಅನಕೃ ಈ ಕತೆಯನ್ನು ಬರೆದಿದ್ದಾರೆ. ಚಿಕ್ಕ ಹುಡುಗನ ಆಸೆಯನ್ನು ಈಡೇರಿಸಲು ಮನೆಗೆ ನಾಯಿಯನ್ನು ಕರೆತರುವ ಯಜಮಾನ, ಅದರ ಲಾಲನೆ, ಪಾಲನೆ, ಭಾವನಾಬಂಧಗಳು ನಮ್ಮಗಳ ಬಾಲ್ಯಗಳನ್ನು, ನಾವು ಸಾಕಿದ ನಾಯಿಗಳನ್ನು ನೆನಪಿಸುತ್ತವೆ. ನೀವು ನಾಯಿಯನ್ನು ಸಾಕಿದ್ದರೆ ಜಾನಿಯ ಕತೆ ಕೇಳಿ ನಿಮ್ಮ ನಾಯಿಯು ಕಣ್ಣ ಮುಂದೆ ಬರುತ್ತದೆ.