ಬಳ್ಳಾರಿ ಜಿಲ್ಲೆಯ ಆಲೂರಿನಲ್ಲಿ ೧೯೨೨ರಲ್ಲಿ ಜನನ. ಸ್ವಾತಂತ್ರ್ಯ ಚಳವಳಿಯಲ್ಲಿ, ನಂತರ ಕರ್ನಾಟಕದ ಏಕೀಕರಣ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸುವಿಕೆ. ಬಳ್ಳಾರಿಯಲ್ಲಿ 'ರೈತ' ಪತ್ರಿಕೆಯ ಸಂಪಾದಕರಾಗಿ ಕಾರ್ಯ. ನಂತರ ನ್ಯಾಯವಾದಿಯಾಗಿ ಮತ್ತು ಜಿಲ್ಲಾ ನ್ಯಾಯಧೀಶರಾಗಿ ಸೇವೆ ಸಲ್ಲಿಸಿದ್ದಾರೆ. ಕವನಸಂಕಲನ, ಸಣ್ಣಕಥೆಗಳ ಸಂಕಲನ, ಕಾದಂಬರಿ, ಸಂದರ್ಶನಗಳು, ಜೀವನಚರಿತ್ರೆ ಸೇರಿ ಹಲವು ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ನಡೆಸಿ ನಲವತ್ತಕ್ಕೂ ಹೆಚ್ಚು ಕೃತಿಗಳ ಪ್ರಕಟನೆ ಮಾಡಿದ್ದಾರೆ. ೧೯೭೯ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.