ಸಮಾಜದಲ್ಲಿ ಜಾತಿ, ಧರ್ಮ, ಪಂಗಡಗಳನ್ನು ಮರೆತು ಕೇವಲ ಮಾನವೀಯತೆ, ಬ್ರಾತೃತ್ವದಿಂದ ಬಾಳುವುದು ಅಸಾಧ್ಯವಾದ ಕಲ್ವನೆ ಎನ್ನುವುದಕ್ಕೆ ಈ ಕತೆಯೇ ಸಾಕ್ಷಿಯಾಗಿದೆ. ಒಂದೇ ಮನೆಯವರಂತೆ ಇದ್ದ ಮುಸ್ಲಿಂ ಮತ್ತು ಹಿಂದೂ ಕುಟುಂಬಗಳ ಅನ್ಯೂನ್ಯತೆ, ಸಹಕಾರ, ಬಂಧುತ್ವ ಎನ್ನುವುದು ಧರ್ಮಾಂದತೆಗೆ ಸಿಲುಕಿ ನುಚ್ಚುನೂರಾಗುತ್ತದೆ. ಮುಸ್ಲಿಂ ಮತಾಂದರು ಧರ್ಮದ ಹೆಸರಿನಲ್ಲಿ ಮಾರಣಹೋಮ ನೆಡುಸುತ್ತಾರೆ. ಇದು ನಿಜವಾಗಲೂ ಸಾಧ್ಯವೇ ಎನಿಸುತ್ತದೆ. ಧರ್ಮ ಎನ್ನುವುದು ಇಷ್ಟರ ಮಟ್ಟಿಗೆ ಒಬ್ಬ ವ್ಯಕ್ತಿಯನ್ನು ಕುರುಡಾಗಿಸುತ್ತದೆಯೇ? ಆಪ್ತ ಸ್ನೇಹಿತ ಇಡೀ ಕುಟುಂಬವನ್ನು ಸರ್ವನಾಶ ಮಾಡುವ ದೃಶ್ಯ ಕಣ್ಭೆದುರು ನಿಂತು ಕಂಬನಿ ಉದುರಿಸುತ್ತದೆ. ಇಲ್ಲಿ ಸ್ನೇಹ ಸಂಬಂಧಗಳಿಗೆ ಬೆಲೆಯೇ ಇಲ್ಲವೇ ಎನಿಸುತ್ತದೆ. ಕೇಳುಗನಿಗೆ ಮನಕಲುಕುವ ಮತ್ತು ಮನಶಾಂತಿ ಕದಡುವ ಕತೆಯಾಗಿದೆ. ಅನಕೃ ರವರು ಅದ್ಬುತವಾಗಿ ಕತೆಯನ್ನು ಹೆಣೆದಿದ್ದಾರೆ.