ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಆನವಟ್ಟಿಯಲ್ಲಿ ೧೯೦೨ ಆಗಸ್ಟ್ ೨೨ ರಂದು ಜನಿಸಿದರು. ಇವರ ಪೂರ್ವಿಕರ ಊರು ಅಜ್ಜಂಪುರ. ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರಗಳಲ್ಲಿ ಬಿ.ಎಸ್.ಸಿ ಪದಲಿ ಪಡೆದು, ಕೆಲ ಕಾಲ ಮೈಸೂರು ಸರ್ಕಾರದ ರೇಷ್ಮೆ ವ್ಯವಸಾಯ ಇಲಾಖೆಯಲ್ಲಿ ಕೆಲಸ ಮಾಡಿದರು. ಕೆಲಸವನ್ನು ಬಿಟ್ಟು, ಕೊನೆಗೆ ಬರವಣಿಗೆಯನ್ನೇ ವೃತ್ತಿಯನ್ನಾಗಿ ಸ್ವೀಕರಿಸಿದರು. ಚಂದ್ರಗ್ರಹಣ, ಸಂಸಾರಶಿಲ್ವ, ಮಾಟಗಾತಿ, ಸ್ವಪ್ನಜೀವಿ, ಜೋಯಿಸರ ಚೌಡಿ ಇತ್ಯಾದಿ ಕಥಾಸಂಕಲನಗಳು. ನಾಟಕ, ಪ್ರಬಂಧ, ಅನುವಾದ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿಯೂ ಕೆಲಸ ಮಾಡಿದ್ದಾರೆ. ಇವರು ೧೯೬೩ ನವೆಂಬರ್ ೧೭ ರಂದು ನಿಧನರಾದರು.
ಓದಿರುವ ಕತೆಗಳು: