ಬರಗಾಲದ ವಸ್ತುಸ್ಥಿತಿಯನ್ನು ತೆರೆದಿಡುವ ಕತೆಯಾಗಿದೆ. ಅವಕಾಶವಾದಿಗಳು ಅನಿವಾರ್ಯತೆಗಳನ್ನು ಬಳಸಿಕೊಳ್ಳುವ ರೀತಿ, ಅದನ್ನು ಒಪ್ಪಿಕೊಳ್ಳಲೇ ಬೇಕಾದ ಸ್ಥಿತಿಯಲ್ಲಿರುವ ಜನ, ಸಾವಿನ ಹೃದಯವಿದ್ರಾವಕ ಚಿತ್ರಣವನ್ನು ಕೋಚೆಯವರು ತಮ್ಮ ಬರಹದಲ್ಲಿ ಚಿತ್ರಿಸಿದ್ದಾರೆ.