ಈ ಕತೆಯನ್ನು ಕೋ. ಚೆನ್ನಬಸಪ್ಪನವರ 'ಸಮಗ್ರ ಕತೆ'ಗಳು ಎಂಬ ಕಥಾಸಂಕಲನದಿಂದ ಆಯ್ದುಕೊಳ್ಳಲಾಗಿದೆ. ಬೀದಿದೀಪಗಳು ಇನ್ನು ಕಾಲಿರಿಸದ ಕಾಲದಲ್ಲಿ ಊರಿನಿಂದ ಬರುವವರಿಗೆಲ್ಲಾ ದೂರದಿಂದಲೇ ಕಂಡು ಕಾಲಿನ ವೇಗವನ್ನು ಹೆಚ್ಚಿಸಲು ಸ್ಪೂರ್ತಿದಾಯಕವಾಗಿದ್ದ ಆ ದೀಪ ಕಣ್ನರೆಯಾಗಿರುವ ಹಿನ್ನಲೆಯನ್ನು ತಿಳಿಸುವಂತಹ ಕತೆಯಾಗಿದೆ. ಇದರ ಹಿನ್ನಲೆಯಲ್ಲಿ ಒಂದು ಗ್ರಾಮದಲ್ಲಿ ನೆಡೆಯುವ ಆಮಿಷಗಳು, ಅಕೃತ್ಯಗಳು ಬಿಚ್ಚಿಗೊಳ್ಲುತ್ತವೆ. ವ್ಯಾಮೋಹಕ್ಕೆ ಸಿಕ್ಕಿಕೊಂಡು ತನ್ನ ಸಮಸ್ತ ಆಸ್ತಿಯನ್ನು ಕಳೆದುಕೊಳ್ಳುವ ತಂದೆ, ಇದೆನ್ನೆಲ್ಲಾ ನೋಡಿಯೂ ಏನೂ ಮಾಡಲಾಗದ ಅಸಹಾಯಕ ಜನ ಮತ್ತು ತಂದೆಯ ಸ್ನೇಹಿತರ ಸ್ಥಿತಿಯನ್ನು ಚೆನ್ನಬಸಪ್ಪನವರು ಸೊಗಸಾಗಿ ಚಿತ್ರಿಸಿದ್ದಾರೆ.