ಕಳೆದ ೫ ವರ್ಷಗಳ ಕೆಳಗೆ ತಿರ್ಥಹಳ್ಳಿಗೆ ಹೋಗಿದ್ದಾಗ ಅಲ್ಲಿನ ಸ್ನೇಹಿತರು ಇಲ್ಲೊಂದು ಕೋಟೆಯಿದೆ, ಹೋಗಬಹುದು ಎಂದರು. ಅವರು ಹೇಳಿದಾಗ ಯಾವುದೊ ಚಿಕ್ಕ ಕೋಟೆ ಇರಬಹುದೆಂದು ತಿಳಿದು ಹೋದೆವು. ನೋಡಿದರೆ ರೋಮಾಂಚನಕಾರಿ ಮತ್ತು ಕೌತುಕಕಾರಿಯಾಗಿತ್ತು. ಇದರ ಸಾಕ್ಷ್ಯಚಿತ್ರ ಮಾಡಲೇ ಬೇಕೆಂದು ಪ್ರತಿಯೊಂದು ಭಾಗವನ್ನು ಸೆರೆಹಿಡಿದುಕೊಂಡು ಬಂದು, ಇದರ ಇತಿಹಾಸಕ್ಕಾಗಿ ಅನೇಕ ಕಡೆ ಪರದಾಡಿದೆವು. ಪುರಾತತ್ವ ಇಲಾಖೆಗೂ ಹೋಗಿ ವಿಚಾರಿಸಿದೆವು. ಅಲ್ಲಿ ಹೆಚ್ಚಿನ ಮಾಹಿತಿ ಸಿಗಲಿಲ್ಲ. ಪಿಎಚ್ ಡಿ ಮಾಡಲು ಒಬ್ಬರು ಬಂದಿದ್ದರು ಅವರನನ್ನು ಸಂಪರ್ಕಿಸಿ ಮಾಹಿತಿ ಸಿಗುತ್ತದೆ ಎಂದರು. ಊಹು.. ಅದು ಉಪಯೋಗವಾಗಲಿಲ್ಲ. ಶಿವವೊಗ್ಗ ಸುತ್ತ ಮತ್ತ ಅನೇಕರಲ್ಲಿ ವಿಚಾರಿಸಿದೆವು. ಪ್ರಯೋಜನವಾಗಲಿಲ್ಲ. ನಮ್ಮ ಹುಮ್ಮಸ್ಸಿಗೆ ತಣ್ಣೀರೆಚಿದಂತಾಯ್ತು. ಇದರೊಂದಿಗೆ ವೈಯಕ್ತಿಕ ಅಡಚಣೆಗಳು ೪ ವರ್ಷಗಳನ್ನು ಮುಗಿಸೇ ಬಿಟ್ಟವು. ಸರಿ ಏನೇ ಆಗಲೀ ಕವಲೇದುರ್ಗ ಸಾಕ್ಷ್ತಚಿತ್ರ ಮಾಡಲೇಬೇಕೆಂದು ಪ್ರಾಥಮಿಕ ಮಾಹಿತಿ ಕಲೆ ಹಾಕಿ ವೀಡಿಯೋಚಿತ್ರಣಗಳನ್ನು ತೆಗೆದರೆ ಆಕಸ್ಮಿಕವಾಗಿಯೋ, ಅಚಾರ್ತುರ್ಯವಾಗಿಯೋ ಎಲ್ಲಾ ದಾಖಲೆಗಳು ಕಳೆದುಹೋಗಿವೆ. ಇನ್ನೂ ನಿರಾಶೆಯಾಯಿತು.ಆದರೂ ಇರುವ ಸ್ಥಿರ ಚಿತ್ರಗಳನ್ನು ಹಾಕಿ ಈ ಚಿತ್ರವನ್ನು ಮಾಡಲಾಗಿದೆ. ನೋಡಿ ನಿಮ್ಮ ಅಭಿಪ್ರಾಯಗಳನ್ನು ಖಂಡಿತ ತಿಳಿಸಿ.