ಜೀವನದಲ್ಲಿ ನಾವು ಏನು ಮಾಡಿದೆವು ಎಂದು ಕುಳಿತು ಯೋಚಿಸಲು ನಮಗೆ ಸಮಯ ಸಿಗುವುದು ಬಹುಶ: ಕೊನೆಗಾಲದಲ್ಲಿಯೇ ಎನಿಸುತ್ತದೆ. ಅದರಲ್ಲೂ ಹಣ ಎಂಬ ಪಿಶಾಚಿ ತಲೆಯಲ್ಲಿ ಇದ್ದರಂಥೂ ಅದರ ಮುಂದೆ ಯಾವ ಸಂಬಂಧಗಳೂ, ಬಾಂಧವ್ಯಗಳೂ ಮನಸ್ಸಿಗೆ ಸುಳಿಯುವುದಿಲ್ಲ. ಅವರುಗಳ ಬೆಲೆಯೂ ನಮಗೆ ಅರ್ಥವಾಗುವುದಿಲ್ಲ. ಆ ಸಮಯದಲ್ಲಿ ಇವುಗಳ ಬಗ್ಗೆ ನಮಗೆ ಯೋಚಿಸಲು ಸಹ ಅಸಾಧ್ಯವಾಗಿರುತ್ತದೆ. ಇಂಥತಹದೊಂದು ವ್ಯಕ್ತಿತ್ವದ ವ್ಯಕ್ತಿಯ ಮನಸ್ಸಿನಲ್ಲಿ ಕೊನೆಯ ಕಾಲದಲ್ಲಿ ಬರುವ ಪ್ರಶ್ನೆ - ಯಾರಿಗಾಗಿ?