ಈ ಸಮಾಜದಲ್ಲಿ ಪ್ರಾಮಾಣಿಕತೆ, ನಿಷ್ಠೆ, ಸತ್ಯತೆಗಳಿಗೆ ಸಿಗುವ ಬೆಲೆ ಏನು? ಸುಳ್ಳು, ಮೋಸ, ಲಂಚಗುಳಿತ, ಅರಾಜಕತೆಗಳು ತುಂಬಿ ತುಳುಕುತ್ತಿರುವ ಸಮಾಜದಲ್ಲಿ ಈ ಆದರ್ಶಗಳನ್ನು ಪಾಲಿಸಲು ಸಾಧ್ಯವೇ? ಇವುಗಳನ್ನು ಪಾಲಿಸುವ ವ್ಯಕ್ತಿಗಳ ಪಾಡು ಏನು? ಎನ್ನುವ ಪ್ರಶ್ನೆ? ಇದೇ ನಿಟ್ಟಿನಲ್ಲಿ ಯೋಚಿಸುವ ವ್ಯಕ್ತಿಗಳಲ್ಲಿ ಕಾಡುವುದು ಸಹಜ.
ಇಂತಹ ಆದರ್ಶ ವ್ಯಕ್ತಿಯು ಮಾಡದೇ ಇರುವ ತಪ್ಪಿಗೆ ಶಿಕ್ಷೆಯ ಮೇಲೆ ಶಿಕ್ಷೆಯನ್ನು ಅನುಭವಿಸುವ ಕತೆಯನ್ನು ಕೋಚೆಯವರು ಬರೆದಿದ್ದಾರೆ. ಜೀವನದಲ್ಲಿ ಒಂದಿನಿತು ತತ್ವಗಳನ್ನು ಪಾಲಿಸ ಹೊರಟ ವ್ಯಕ್ತಿಗಳ ಮನಸ್ಸಿನಲ್ಲಿ ಇದನ್ನು ಕೇಳಿದ ಮೇಲೆ ನಾವು ಯಾವ ರೀತಿ ಇದ್ದರೆ ಸರಿ ಎನ್ನುವ ಪ್ರಶ್ನೆ ಬರುವುದರಲ್ಲಿ ಸಂಶಯವಿಲ್ಲ!!!!!