ಹೆಸರೇ ಸೂಚಿಸುವಂತೆ ಇದು ಸ್ತ್ರಿ ಕೇಂದ್ರಿತ ಕತೆ. ಈ ಕತೆಯಲ್ಲಿನ ನಾಯಕಿ ಬಾಬಿಯಕ್ಕ, ಅವಳ ನಡೆ ನುಡಿ, ವ್ಯಕ್ತಿತ್ವ, ಸಮಾಜದಲ್ಲಿ ಇರುವ ಸ್ಥಾನಮಾನ, ಅವಳು ಬೇರೆಯವರನ್ನು ನೆಡೆಸಿಕೊಳ್ಳುವ ರೀತಿ.......... ನ್ಯಾಯ ಅನ್ಯಾಯಗಳ ಚರ್ಚೆ, ಅವಳ ದೃಷ್ಟಿಕೋನ ಇವೆಲ್ಲವನ್ನು ಲೇಖಕರು ತಮ್ಮ ಅಕ್ಷರಗಳ ಮೂಲಕ ಜೀವ ತುಂಬಿದ್ದಾರೆ. ಒಂದು ಸಿನಿಮಾ ಕತೆಯನ್ನು ಮೆಚ್ಚಿದ ನಾಯಕಿ, ಅದೇ ಘಟನೆ ಮನೆಯಲ್ಲಿ ನೆಡೆದಾಗ, ಸಮಸ್ಯೆ ತನಗೆ ಎದುರಾದಾಗ ಏನು ಮಾಡುತ್ತಾಳೆ. ಇಡೀ ಮನೆಯು ಇವಳ ಆಜ್ಞೆಯನ್ನು ಪಾಲಿಸುತ್ತಿರುವಾಗ, ಈ ಘಟನೆಯ ನಿರ್ಣಯ ಏನಾಯ್ತು? ಅಂತ್ಯದಲ್ಲಿ ಮನೆಯ ಕೆಲಸದಾಕೆ ಹೇಳುವ ಮಾತನ್ನು ಓದುಗ ಹೇಗೆ ಅರ್ಥೈಸಿಕೊಳ್ಳುತ್ತಾನೆ?????? ಕೊನೆಯವರೆಗೆ ಕೂತೂಹಲವನ್ನು ಕಾಯ್ದಿಟ್ಟುಕೊಳ್ಳುವ ಕತೆ ಇದಾಗಿದೆ.