ತುಂಬಾ ದಿನಗಳಿಂದ ಓದಬೇಕೆಂದು ಹಂಬಲಿಸುತ್ತದ್ದ ಕಾರಂತರ "ಬೆಟ್ಟದ ಜೀವ" ಕಾದಂಬರಿಯನ್ನು ಇಂದು ಮುಗಿಸಿದೆ. ಮೇಲುನೋಟಕ್ಕೆ ಅಷ್ಟೊಂದು ವೈಶಿಷ್ಟ್ಯತೆಯಿಂದ ಕೂಡಿರದಿದ್ದರೂ, ಅಂತರಾಳದಲ್ಲಿ ಬೆಟ್ಟದ ಮೇಲೆ ವಾಸಿಸುತ್ತಿರುವ ದಂಪತಿಗಳು ತಮ್ಮ ಕರುಳಕುಡಿಗಾಗಿ ಹಗಲಿರುಳು ಹಂಬಲಿಸುವುದು. ಮುಂದೆ ಒಮ್ಮೆಯಾದರೂ ಬಂದಾರು ಎಂದು ತಮ್ಮಲ್ಲಿಟ್ಟು ಕೊಂಡಿರುವ ಆಶಾಕಿರನವನ್ನು ಲೇಖಕರ ಎದುರಲ್ಲಿ ತೋಡಿಕೊಳ್ಳುವುದನ್ನು ಕತೆಯಲ್ಲಿ ಸೊಗಸಾಗಿ ಮೂಢಿಸಿದ್ದಾರೆ.
ದಾರಿತಪ್ಪಿ ಹೋದ ಲೇಖಕರು ಹವ್ಯಕ ದಂಪತಿಗಳ ಆದರ ಆತಿಥ್ಯಗಳಿಗೆ ಕಟ್ಟುಬಿದ್ದು, ನಾಲ್ಕುದಿನ ತಂಗಿ, ಅವರ ಮಾತುಗಳಿಂದ ಆ ಕುಟುಂಬದ ಕಥೆಯನ್ನು ತಿಳಿದುಕೊಳ್ಳುತ್ತಾರೆ. ವ್ಯಕ್ತಿಗಳಲ್ಲಿರುವ ಬಾಂಧವ್ಯ, ಪ್ರೀತಿ, ವಿಶ್ವಾಸ, ಕೇವಲ ಹಣದಿಂದಲೇ ಎಲ್ಲವೂ ಎಂದೂ ಸ್ವಾರ್ಥದಿಂದ ನೋಡುವ ಜನರಿಂದ ಹೊರತಗಿ ಅನಾಥ ವ್ಯಕ್ತಿಯನ್ನು ತನ್ನ ಮನೆಯ ಮಗನಾಗಿ ಬೆಳೆಸುವುದು. ಎಲ್ಲಿಂದಲೋ ಬಂದ ಅಜ್ಞಾಡ ವ್ಯಕ್ತಿಯನ್ನು ಆಧರಿಸಿ, ಎಲ್ಲಿ ಎತ್ತ ಎಂದ ಅನುಮಾನಿಸದೇ ತಮ್ಮವರೇ ಎಂಬಂತೆ ಕಂಡು, ತಮ್ಮ ಹತ್ತಿರದವರೊಂದಿಗೆ ಕಷ್ಟ ಸುಖಗಳನ್ನು ಹಂಚಿಕೊಳ್ಳುವಂತೆ, ಗುರುತು ಪರಿಚಯವೇ ಎರದ ಲೇಳಕರೊಂದಿಗೆ ಹಂಚಿಕೊಳ್ಳುತ್ತಾರೆ. ಲೇಖಕರ ಮೂಲಕವೂ ತಮ್ಮ ಮಗ ಸಿಕ್ಕಾನೆಂಬ ಆಶೆಯನ್ನು ಹೊಂದುತ್ತಾರೆ. ಜನನಿಬಿಡ ಪ್ರದೇಶದಿಂದ ದೂರವಾಗಿ ಕಾಡಲ್ಲೇ ಅಲ್ಲಿನ ಸುತ್ತಮುತ್ತಲಿನ ಜನರೊಂದಿಗೆ, ಕಾಡು ಮೃಗಗಳ ಕಾಟಗಳಿಗೆ ಒಗ್ಗಿಕೊಂಡು ಜೀವಿಸುವ ವ್ಯಕ್ತಿಗಳ ಚಿತ್ರಣವನ್ನು ತೆರೆದಿಟ್ಟಿದ್ದಾರೆ.
ಕಾರಂತರು ತಮ್ಮ ಜೀವನದಲ್ಲಿ ನೆಡೆದ ಮತ್ತು ನೋಡಿದ ವ್ಯಕ್ತಿಯ ಜೀವನ ಶೈಲಿಯನ್ನು ಕಾದಂಬರಿ ರೂಪದಲ್ಲಿ ನಮ್ಮ ಮುಂದೆ ತೆರೆದಿಟ್ಟಿದ್ದಾರೆ. ಬೆಟ್ಟದಲ್ಲಿ ನೆಲಸಿರುವ ಜೀವಗಳು ಅಪಸ್ವರ ಬೇರೆ ಬೇರೆ ಜೀವಗಳೊಂದಿಗೆ ತಳುಕು ಹಾಕಿಕೊಂಡು ಬೇರೆಲ್ಲೋ ಇರುವ ಜೀವಗಳಿಗಾಗಿ ಹಂಬಲಿಸಿವುದನ್ನು ಸೊಗಸಾಗಿ ತಿಳಿಸಿದ್ದಾರೆ.