ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಇದ್ದ ಪರಿಸ್ಥಿತಿಯನ್ನು ಅತ್ಯಂತ ಮಾರ್ಮಿಕ ಮೂಢಿಸಿದ್ದಾರೆ ಲೇಖಕರಾದ ಅ ನ ಕೃ ರವರು. ಬ್ರೀಟೀಷರು ಭಾರತೀಯರನ್ನು ಸೈನ್ಯಕ್ಕೆ ಸೇರಿಸಿಕೊಳ್ಳುತ್ತಿದ್ದ ಬಗೆ. ದೇಶದಲ್ಲಿ ಮೂಢಿಸಿದ್ದ ಸಾಂಧರ್ಬಿಕ ಕ್ಷಾಮ, ನಮ್ಮವರೇ ನಮ್ಮವರ ವಿರುದ್ದ ಹೋರಾಡುವಂತಹ ಪರಿಸ್ಥಿತಿ. ಹಸಿವೆಯ ಸಂದರ್ಭದಲ್ಲಿ ವ್ಯಕ್ತಿಗಳು ಪಡುವ ಪಡಿಪಾಡಲು, ಅವಕಾಶವಾದಿಗಳ ತಂತ್ರಗಳು, ಮತಾಂತರ ನೆಡೆಯುತ್ತಿದ್ದ ರೀತಿ. ಇಂತಹ ಪರಿಸ್ಥಿತಿಯಲ್ಲಿ ಸಿಕ್ಕಿ ಹಾಕಿಕೊಂಡ ತಂದೆಯಿಲ್ಲದ ಒಂದು ಕುಟುಂಬ ಪಟ್ಟ ಕಷ್ಟ, ಅವರ ಸ್ಥಿತಿ ಮುಂದೇನಾಯಿತು? ಅವರ ಕತೆ ದು:ಖಾಂತ? ಸುಖಾಂತವಾಯಿತೇ? ಹಸಿವು ಆ ಕುಟುಂಬವನ್ನು ಎಲ್ಲಿಗೆ ತಂದು ನಿಲ್ಲಿಸುತ್ತದೆ ಎಲ್ಲವನ್ನು ಒಳಗೊಂಡಿದೆ ' ಅನ್ನದ ಕೂಗು'. ದೇಶಪ್ರೇಮ, ಮಾನವೀಯತೆ, ಸ್ನೇಹ, ಪ್ರೀತಿ, ಸಹಕಾರ, ಅನ್ನದ ಋಣಗಳನ್ನು ಕತೆಯು ಎತ್ತಿಹಿಡಿಯುತ್ತದೆ.