ಸಾಮಾನ್ಯವಾಗಿ ನಾವು ನಮ್ಮ ಸುತ್ತಮುತ್ತ ಅನೇಕ ನಾಯಿಗಳನ್ನು ನೋಡುತ್ತೇವೆ. ಅದರ ಬಗ್ಗೆ ನಾವು ಯಾವಾಗಲೂ ಹೆಚ್ಚಿಗೆ ಗಮನಿಸುವುದಿಲ್ಲ. ಆದರೆ ಈ ಕತೆಯಲ್ಲಿನ ನಾಯಕ ಒಂದು ನಾಯಿಯು ತನ್ನನ್ನು ತಿರಸ್ಕರಿಸುವುದನ್ನು ಕಂಡು ಅಚ್ಚರಿಗೊಳ್ಳುತ್ತಾನೆ. ಮಾತನಾಡಿಸದ, ಅದರ ಬಗ್ಗೆ ನೋಡದೇ, ಅದನ್ನು ಗಮನಿಸದೇ ಇರುವ ಅನೇಕ ವ್ಯಕ್ತಿಗಳ ಹತ್ತಿರ ಅದು ಹೋಗುತ್ತದೆ. ಆದರೆ ಪ್ರೀತಿಯಿಂದ ಮಾತನಾಡಿಸುವ, ಅದಕ್ಕೆ ತಿನ್ನಲು ಕೊಡಲು ಮುಂದಾಗುವ ನಾಯಕನನ್ನು ಮಾತ್ರ ಅದು ನೋಡುವುದಿಲ್ಲ. ನೋಡಿದರೂ ಭಯಮಿಶ್ರತ ಕಣ್ಣಗಳೇ ಇರುತ್ತವೆ. ಅದರ ಮಾಲೀಕರು ಅದನ್ನು ಇವರ ಬಳಿ ಬಿಟ್ಟು ಹೋದಾಗಲೂ ಕೂಡ ಅದರ ವರ್ತನೆ ಇವರಲ್ಲಿ ಅನೇಕ ಪ್ರಶ್ನೆಗಳನ್ನೇಳಿಸುತ್ತದೆ. ಅದು ಸಾವಿನ ದವಡೆಯಲ್ಲಿ ಇದ್ದಾಗಲೂ ಕೂಡ ಇವರನ್ನು ಸ್ವೀಕರಿಸದೇ ಸಾವನ್ನೇ ಅಪ್ಪಿಕೋಳ್ಳುವುದು ಅಶ್ಚರ್ಯವಾಗಿದೆ. ಯಾಕೆ? ಎಂಬ ಪ್ರಶ್ನೆ ನಮ್ಮಲ್ಲೂ ಮೂಢುತ್ತದೆ. ನಾಯಿಯ ವರ್ತನೆಯ ಮೂಲಕ ತಮ್ಮನ್ನು ತಾವು ವಿಮರ್ಶೆ ಮಾಡ ಹೊರಟಿದ್ದಾರೆ. ಇಲ್ಲಿ ನಾಯಿ ಒಂದು ಸಂಕೇತ ಮಾತ್ರ ಎಂದನೆಸುತ್ತದೆ ಕೂಡ. ನಾವು ಸರಿಯಾಗಿದ್ದೇವೆ. ನಮ್ಮಲ್ಲಿ ಏನೊ ದೋಷಗಳಿಲ್ಲವೆಂದು ಭಾವಿಸುವ ಸಾಮಾನ್ಯ ಜನರಿಗೆ, ಮಾತನಾಡ ಬರದ ಒಂದು ಪ್ರಾಣಿಯ ವರ್ತನೆ ಕೆಲವು ಅಂಶಗಳನ್ನು ತಿಳಿಸಿಕೊಡುತ್ತದೆ ಎನ್ನುವುದನ್ನು ಬ್ರೆಕ್ಟ ಈ ಕತೆಯ ಮೂಲಕ ತಿಳಿಸಿದ್ದಾರೆ.