"ಪರಿಸರದ ಕತೆ" ಎಂಬ ಪುಸ್ತಕದಿಂದ ಆಯ್ದಕೊಂಡ ಕತೆಯಾಗಿದೆ. ಇದರಲ್ಲಿ ಇರುವ ಅನುಭವಗಳು ಹಳ್ಳಿಗಾಡಿನಲ್ಲಿ ಸಾಮಾನ್ಯವಾಗಿ ಕಂಡು ಬರುತ್ತವೆ. ಆದರೆ ಅದನ್ನು ನೋಡಿ, ಕೇಳಿ ಅಲ್ಲಿಗೆ ಅದನ್ನು ಮರೆಯುವ ನಮಗೆ , ತೇಜಸ್ವಿಯವರ ಬರಹ ಮತ್ತೆ ನಮ್ಮನ್ನು ಹಳೆಯ ನೆನಪುಗಳಿಗೆ ಕರೆದುಕೊಂಡು ಹೋಗುತ್ತದೆ. ಓದಿದವರಿಗೆ ಇದು ಕೇವಲ ಕತೆ ಎನ್ನಿಸಬಹುದು. ಆದರೆ ಇದು ಸತ್ಯ ಕತೆಯಾಗಿದೆ. ಇದೇ ರೀತಿಯ ಇನ್ನು ಅನೇಕ ಅನುಭವಗಳು "ಪರಿಸರದ ಕತೆ"ಯಲ್ಲಿವೆ.