ಕೆಲವೊಮ್ಮೆ ನಾವುಗಳು ಸರಿಯಾಗಿ ಯಾವುದನ್ನು ಪರಿಶೀಲಿಸುವುದಿಲ್ಲ, ಬೇರೆಯವರು ಹೇಳುವುದನ್ನೂ ಕೇಳುವುದಿಲ್ಲ, ನಾವು ಮಾಡುವುದೇ ಸರಿ, ಜೊತೆಗೆ ಮಾಡುತ್ತಿರುವುದೂ ಸರಿ ಎಂದು ಅಂದು ಕೊಳ್ಳುತ್ತೇವೆ. ಯಾವಾಗಲಾದರೂ ಮುಂದೊಮ್ಮೆ ಅನಿಸುತ್ತದೆ. ಹೌದು ನಾನು ಹಿಂದೆ ಮಾಡಿದ್ದು ಸರಿ ಅಲ್ಲ ಅಂದು! ಆದರೆ ಅಷ್ಟರಲ್ಲಿ ಕಾಲ ಮುಂಚಿ ಹೋಗಿರುತ್ತದೆ. ಸರಿ ಮಾಡಿಕೊಳ್ಳಬಹುದಾದ ಸಂಗತಿಗಳಾದಲ್ಲಿ ಸರಿದೂಗಿಸಿಕೊಂಡು ಹೊಗಬಹುದು. ಸರಿ ಪಡಿಸಲಾಗದಂತಹವುಗಳಾದರೆ????
ತಿಳಿವು ಮೂಡಿತು - ಶಿರ್ಷಿಕೆಯೇ ಹೇಳುವಂತೆ, ಇದರ ನಾಯಕ ದುಡುಕಿನಿಂದ, ಮುಂಗೋಪದಿಂದ ಮಗುವಿನ ಸಾವಿಗೆ ಮೂಲ ಕಾರಣ ತನ್ನ ಹೆಂಡಿಯೇ ಎಂದು ಆಕೆಯನ್ನು ದು:ಖದಿಂದ ಸಂತ್ವಾನ, ಸಮಾಧಾನವನ್ನೂ ಹೇಳದೇ ಅವಳ ತವರಿಗೆ ಕಳುಹಿಸಿರುತ್ತಾನೆ. ಯಾರ ಉಪದೇಶ, ಸಲಹೆಗಳನ್ನೂ ಕೇಳುವ ಮನ:ಸ್ಥಿತಿ ಅವನದಾಗಿರುವುದಿಲ್ಲ. ಆದರೂ ಇಂಥ ವ್ಯಕ್ತಿಗೆ ಒಂದು ದಿನ ತನ್ನ ತಪ್ಪಿನ ಅರಿವಾಗುತ್ತದೆ.! ? ಹೇಗೆ? ಯಾವುದರಿಂದ ? ಅತ್ಯಂತ ಸರಳವಾಗಿ, ಚೊಕ್ಕವಾಗಿರುವ ಕತೆ ಇದಾಗಿದೆ.