ಎಲ್ಲರೂ ಸಮಾನ ಮನಸ್ಸಿನ ದುಃಖಿಗಳು. ಯುದ್ಧದಲ್ಲಿ ತಮ್ಮ ತಮ್ಮ ಮಕ್ಕಳನ್ನು ಕಳೆದುಕೊಂಡ ಪೋಷಕರು ಒಂದು ದಿಕ್ಕಿನೆಡೆಗೆ ಪ್ರಯಾಣಿಸುತ್ತಿದ್ದಾರೆ. ಎಲ್ಲರೂ ತಮ್ಮ ತಮ್ಮ ದುಃಖಗಳನ್ನು ಹೇಳಿಕೊಳ್ಳುತ್ತಾರೆ. ಎಲ್ಲರ ಸಂಕಷ್ಟಗಳಿಗೆ ಸಮಾಧಾನ ನೀಡುವ ರೀತಿಯಲ್ಲಿ ಒಬ್ಬ ತಂದೆ ತನ್ನ ಮಗನು ಹೇಳಿದ ಮಾತುಗಳನ್ನು ಹೇಳಿ, ಅದರ ಪ್ರಕಾರ ನನ್ನ ಮನಸ್ಸು ಎಷ್ಟು ಗಟ್ಟಿ ಎಂದು ತೋರಿಸುತ್ತಾನೆ. ಆದರೆ ಕಡೆಯಲ್ಲಿ ಒಬ್ಬ ತಾಯಿ ಕೇಳುವ ಪ್ರಶ್ನೆ ಅವನ ಕಠಿಣ ನಿರ್ಧಾರವನ್ನು ಅಲ್ಲಾಡಿಸುತ್ತದೆ. ಆ ತಾಯಿ ಕೇಳಿದ ಪ್ರಶ್ನೆ ಎಂತಹುದು?........ ಮನದಲ್ಲಿ ಎಷ್ಟೇ ದೇಶಪ್ರೇಮವಿದ್ದರೂ ಪುತ್ರ ಪ್ರೇಮದ ಮುಂದೆ ಅದು ಯಾವುದು ತಡೆಯುವುದಿಲ್ಲ ಎನ್ನುವುದಕ್ಕೆ ಈ ಕತೆ ಸಾಕ್ಷಿಯಾಗುತ್ತದೆ.