ಬೆಂಗಳೂರಿಗೆ ಬಂದು ಸರಿಸುಮಾರು ೯ ವರ್ಷಗಳು ಕಳೆದು ಹೋದವು. ಆದರೆ ಶರವೇಗದಲ್ಲಿ ಬೆಳೆಯುತ್ತಿರುವ ಸಂಪೂರ್ಣ ಬೆಂಗಳೂರಿನ ದರ್ಶನ ಇನ್ನೂ ಸಾಧ್ಯವಾಗಿಲ್ಲ. ಅದಕ್ಕೆ ಹಲವಾರು ಕಾರಣಗಳು..... ೪ ೧/೨ ವರ್ಷದ ಮಗನಿಗೆ ಬೆಂಗಳೂರಿನ ಇತಿಹಾಸವನ್ನು ಹೇಳಿ, ಜನಸಾಗರದಲ್ಲಿ ಕಳೆದು ಹೋಗಿರುವ, ಉಳಿದ ಬೆಂಗಳೂರು ಕೋಟೆ, ಮತ್ತು ಅದರ ಆವರಣದಲ್ಲಿರುವ ಟಿಪ್ಪು ಸುಲ್ತಾನನ ಬೇಸಿಗೆ ಅರಮನೆ ಯನ್ನು ತೋರಿಸಿ ಬಂದಾಗ ಅನಿಸಿತು ಇದರ ಒಂದು ಸಾಕ್ಷ್ಯಚಿತ್ರ ಮಾಡೋಣವೆಂದು. ಆದರೆ, ಆಲೋಚನೆ ಕಾರ್ಯಕತವಾಗಲು ೧ ವರ್ಷ ಕಳೆದೇ ಹೋಯಿತು. ಮೊನ್ನೆ ಮೊನ್ನೆ ನೋಡಿ ಬಂದಿದ್ದು ಅಂತ ಅಂದುಕೊಳ್ಳುತ್ತಿರುವಾಗಲೇ ವರ್ಷ ಕಳೆದುಹೊದುದು ತಿಳಿಯಲೇ ಇಲ್ಲ. ಪೋಟೋ ನೋಡಿದಾಗಲೇ ತಿಳಿದಿದ್ದು ವರ್ಷವಾಯಿತೆಂದು!!!! ಬೆಂಗಳೂರಿನ ಸಂಕ್ಷಿಪ್ತ ಇತಿಹಾಸದೊಂದಿಗೆ ಅರಮನೆಯನ ಸಾಕ್ಷ್ಯಚಿತ್ರವನ್ನು ಸಿದ್ದಪಡಿಸಿದ್ದೇನೆ. ನೋಡಿ ನಿಮ್ಮ ಅನಿಸಿಕೆಗಳನ್ನು ತಿಳಿಸಿ.