ಸಮಾಜದಲ್ಲಿರುವ ಎಲ್ಲಾ ಸಂಪತ್ತನ್ನು ಎಲ್ಲರು ಅನುಭವಿಸಬೇಕು, ಅಗತ್ಯಕ್ಕಿಂತ ಹೆಚ್ಚಿಗೆ ಆಸ್ತಿಯನ್ನು ಹೊಂದುವುದು ಸಲ್ಲದು ಎಂಬ ಪರಿಕಲ್ಪನೆಯಡಿ ಬಂದ ಅನೇಕ ಕಾನೂನುಗಳು ಹಲವರನ್ನು ಹಲವು ರೀತಿಯಲ್ಲಿ ಪೇಚಿಗೆ ಸಿಲುಕಿಸಿದೆ. ಇಲ್ಲೂ ಕೂಡ ಪೇಚಾಡುವುದು ಮಧ್ಯಮ ವರ್ಗದ ಜನವೇ. ದುರ್ಬಲರ ಮೇಲೆ ದುರ್ಬಲರ ಸವಾರಿ!!! ಗೊರೂರು ಅವರ "ಮರೆಯಾದ ಮಾರಮ್ಮ" ಕಥಾ ಸಂಕಲನದಿಂದ ಆಯ್ದುಕೊಂಡ ಈ ಕತೆಯಲ್ಲೂ ಇದೇ ವ್ಯಥೆಯಿದೆ. ತನಗೆ ಜೀವನೋಪಾಯಕ್ಕಾಗಿರುವ ಅಲ್ಪ ಆಸ್ತಿಯನ್ನು ಉಳಿಸಿಕೊಳ್ಳಲು, ತನ್ನ ಮನೆಯಲ್ಲಿರುವ ಅನ್ಯರನ್ನು ಓಡಿಸಲು ನ್ಯಾಯಾಲದ ಮೆಟ್ಟಿಲ ಹತ್ತಿ, ಇಷ್ಟ ದಿನ ಕಷ್ಟಪಟ್ಟ ಕೂಡಿ ಹಾಕಿದ ಹಣವನ್ನು ಕಳೆದುಕೊಳ್ಳುವ ದುರ್ಗತಿ ಯೊಂದಿಗೆ ಬಾಡಿಗೆದಾರರಿಂದ ಪಡೆಯಬಹುದಾದ ವಿವಿಧ ರೀತಿಯ ತಿರುವಳಿಗಳನ್ನು ತಿಳಿದ್ದಾರೆ. ತಮಾಷೆಯಿಂದ ಕೂಡಿದ ಪರಿಪಾಟಲ ಕತೆಯಾಗಿದೆ