ಪ್ರತಿನಿತ್ಯ ಹಾದಿಬೀದಿಗಳಲ್ಲಿ ಓಡಾಡುವಾಗ ಆಚೀಚೇ ಅನೇಕ ಕಡೆಗಳಲ್ಲಿ ಹರಿದುಹೋದ, ಒಂಟಿಯಾಗಿರುವ ಅನೇಕ ವಿಧದ ಚಪ್ಪಲಿಗಳು ಶೂ ಗಳನ್ನು ನೋಡುತ್ತೇವೆ. ನೋಡಿದಾಕ್ಷಣ ಯಾರದೋ? ಯಾಕೋ? ಹೇಗೋ? ಅಂದೆನುಸುತ್ತದೆ ಅಷ್ಟೆ. ಒಮ್ಮೆ ಒಂದು ಚಪ್ಪಲಿ ಕಿತ್ತು ಹೋಗಿರಬಹುದು ಅದಕ್ಕೆ ಅಲ್ಲೇ ಬಿಟ್ಟಿದ್ದಾರೆ ಅನಿಸುತ್ತದೆ. ರಸ್ತೆ ಮೇಲೆ ಬಿದ್ದಿದ್ದರೆ ಅಪಘಾತವಾಗಿರಬಹುದು ಅನಿಸುತ್ತದೆ. ಮಕ್ಕಳ ಚಪ್ಪಲಿಯಾದರೆ, ಸ್ಕೂಟರ್ ಅಥವಾ ಬೈಕಿನಲ್ಲಿ ಹೋಗುವಾಗ ಬೀಳಿಸಿಕೊಂಡಿರಬಹುದು ಅನಿಸುತ್ತದೆ. ಹೀಗೆ ಚಪ್ಪಲಿಯ ಸುತ್ತು ನಮ್ಮ ಆಲೋಚನೆಗಳು ಅದು ಬಿದ್ದಿರುವ ಸ್ಥಳ, ಸ್ಥಿತಿ, ಅವಸ್ಥೆಗನುಗುಣವಾಗಿ ರೂಪುಗೊಳ್ಳುತ್ತಾ ಹೋಗುತ್ತವೆ. ಅದೇ ರೀತಿ ಲೇಖಕರು ಒಂದು ಚಪ್ಪಲಿಯನ್ನು ನೋಡಿದಾಗ ಏನಾಯಿತು? ಅನ್ನುವುದನ್ನು ತಮ್ಮ ಈ ಕತೆಯಲ್ಲಿ ಬರೆದಿದ್ದಾರೆ.