ಒಂದು ಸಂಸಾರದಲ್ಲಿ ಬರಿಯ ಹೆಣ್ಣುಮಕ್ಕಳೇ ಇದ್ದು ತಾಯಿಗೆ ಒಂದಾದರೂ ಗಂಡುಮಗುವಾಗಲೆಂಬ ಆಸೆ ಇರುತ್ತದೆ. ಅದು ನೆರವೇರದಿದ್ದರಿಂದ, ಕಡೆಯ ಮಗಳು ಅಳಿಯ ಇವರನ್ನು ಮನೆಯಲ್ಲಿ ಇಟ್ಟುಕೊಂಡು, ಅಳಿಯನನ್ನೇ ಮಗನಂತೆ ಕಂಡುಕೊಂಡಿದ್ದರು. ಹೀಗಿರಲು, ಒಬ್ಬ ಗುರುಗಳು ಕೋರಿದ್ದನ್ನೆಲ್ಲಾ ಕೊಡುತ್ತಾರಂದು ಕೇಳಿ, ಅವರಲ್ಲಿ ಸೇವೆ ಮಾಡಿ, ಆಕೆ ತನಗೆ ಪುತ್ರ ಸಂತಾನವಾಗಬೇಕೆಂದು ಹಟಹಿಡಿದಳು. ಅವರು ಎಷ್ಟು ಬೇಡವೆಂದರೂ ಕೇಳಲಿಲ್ಲ. ಒಂದು ಹೋಗಿ ಒಂದಾಯಿತು. ತಾಯಿಯ ಸಂಕಟ, ಗುರುಗಳ ಸಂತಯಿಕೆ ಯಿಂದ ಕೂಡಿದ ಕತೆಯು ಅರ್ಥಪೂರ್ಣವಾಗಿದೆ.