ಅನಾದಿ ಕಾಲದಿಂದ ಪದ್ದತಿಯಲ್ಲಿ ಇದ್ದ ವರ್ಣಾಶ್ರಮ ವ್ಯವಸ್ಥೆಯ ಆಚರಣೆಗಳು ಇತ್ತಿಚಿನ ದಿನಗಳಲ್ಲಿ ಕಣ್ಮರೆಯಾಗಿವೆ. (ಇಂದಿಗೂ ಅಲ್ಲಲ್ಲಿ ಅಲ್ವಸಲ್ಪ ಕಾಣಬಹುದೆನೋ). ಅದರಲ್ಲೂ ಗ್ರಾಮಗಳಲ್ಲಿ ಇದರ ಗಾಢತೆ ತೀವ್ರವಾಗಿತ್ತು. ಕೆಳವರ್ಗದವರು ಎಂದು ವಿಂಗಡಿಸಿರುವ ಜನರನ್ನು ಮುಟ್ಟುದಿರುವುದು, ಮನೆಯ ಒಳಗೆ ಪ್ರವೇಶವನ್ನು ನಿರಾಕರಿಸುವುದು, ಅವರಿಗೆಂದೆ ಪ್ರತ್ಯೇಕವಾದ ಪಾತ್ರೆಗಳನ್ನು ಬಳಸುವುದು, ಅವರ ಕೇರಿಗಳಿಗೆ ಮಕ್ಕಳು ಹೋಗದಂತೆ ತಡೆಯುವುದು, ಹೀಗೆ ಅದರ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಅದರಲ್ಲೂ ಶಿಕ್ಷಣಕ್ಕೆ ಬಂದರೆ, ಅವರು ಕೇವಲ ದುಡಿಯುವವರೇ ಹೊರತು ಆಳುವವರಲ್ಲ. ಅವರನ್ನು ಶಿಕ್ಷಣದಿಂದಲೇ ದೂರವಿರಸಲಾಗಿತ್ತು. ಅದಕ್ಕೆ ಇನ್ನೊಂದು ಪ್ರಮುಖ ಕಾರಣವೆಂದರೆ ಅವರ ಆರ್ಥಿಕ ಪರಿಸ್ಥಿತಿ. ಅದರಲ್ಲೂ ಸ್ವಲ್ಪ ಯೋಚಿಸಿ ನಮ್ಮ ಮಕ್ಕಳು ವಿದ್ಯೆ ಕಲಿಯಲಿ ಎಂದು ಶಾಲೆಗೆ ಕಳುಹಿಸಿದರೆ, ಅಲ್ಲಿ ಇದ್ದ ವ್ಯವಸ್ಥೆಯಿಂದ, ಅವಮಾನಗಳಿಂದ ಮಗು ವಿದ್ಯೆ ಕಲಿಯುವುದು ದೂರದ ಮಾತು. ಅದನ್ನು ಸಹಿಸಿಕೊಂಡು ಮುಂದೆ ಹೋದ ವಿದ್ಯಾರ್ಥಿ ನೌಕರಿ ಪಡೆದು ಅದೇ ಶಾಲೆಗೆ ಬಂದರೆ..............????????
ಇಂಥದೊಂದು ಕತೆಯನ್ನು ಲೇಖಕರು ನಮ್ಮ ಮುಂದೆ ಇಟ್ಟಿದ್ದಾರೆ. ಡಿಸೋಜರವರು ನೋಡಿರಬಹುದಾದ ಘಟನೆಗಳೆಂದು ನಾವು ನಂಬಬಹುದಾಗಿದೆ. ಒಬ್ಬ ಕೆಳವರ್ಗದ ವಿದ್ಯಾರ್ಥಿಯು ಶಾಲೆಯಲ್ಲಿ ಅನುಭವಿಸುವ ಯಾತನೆಗಳನ್ನು ಕಣ್ಣಿಗೆ ಕಟ್ಟುವಂತೆ ಈ ಕತೆಯಲ್ಲಿ ಮೂಢಿಸಿದ್ದಾರೆ. ಮನಸ್ಸಿಗೆ ಅಷ್ಟೇ ನೋವನ್ನುಂಟು ಮಾಡುವ ಕತೆಯೂ ಕೂಡ ಇದಾಗಿದೆ.