ಪ್ರತಿಯೊಂದು ಕ್ಷೇತ್ರದಲ್ಲೂ ಒಬ್ಬರನ್ನು ಒಬ್ಬರು ಕಾಲೇಳೆಯುವುದನ್ನು ಕಾಣುತ್ತೇವೆ. ಈ ಕಾರಣದಿಂದ ಎಷ್ಟೋ ಸಂಘ ಸಂಸ್ಥೆಗಳು ಜನರಿಗೆ ಪರಿಚಯವಾಗುವ ಮೊದಲೇ, ಅತೀ ಅಲ್ಪ ಕಾಲದಲ್ಲೇ ಕಣ್ಮರೆಯಾಗಿರುವುದನ್ನು ಕಾಣುತ್ತೇವೆ. ಇದಕ್ಕೆ ಸಾಹಿತ್ಯ ಕ್ಷೇತ್ರ ಹೊರತಾಗಿಲ್ಲ. ಅಂತಹದೊಂದು ಸಾಹಿತ್ಯ ಸಂಘ ಹುಟ್ಟಿಕೊಂಡು ಅದು ಅವಶನಗೊಂಡ ಕತೆಯನ್ನು ಕೋ. ಚೆನ್ನಬಸಪ್ಪನವರು ಬರೆದಿದ್ದಾರೆ.