ಮೌರಿಸ್ ಮ್ಯಾಟರ್ ಲಿಂಕ್ ಅವರು ಬರೆದಿರುವ ಈ ಕತೆಯನ್ನು ಎಸ್. ದಿವಾಕರ್ ಪ್ರತಿಯೊಂದು ಸನ್ನಿವೇಶ ಕಣ್ಣಿಗೆ ಕಟ್ಟುವಂತೆ ಅನುವಾದಿಸಿದ್ದಾರೆ. ಈ ಕತೆಯನ್ನು ಓದಿದರೆ, ಕೇಳಿದರೆ ಅತ್ಯಂತ ವಿಷಾದವಾಗುತ್ತದೆ. ಇಂತಹ ಘಟನೆಗಳು ನೆಡೆಯದೆ ಇರಲು ಸಾಧ್ಯವಿಲ್ಲ ಅಂತಲೂ ಅನಿಸುತ್ತದೆ. ಅಕ್ಕ ಪಕ್ಕದ ಊರುಗಳ ಆಕ್ರಮಣ ಮಾಡಿ ಲೂಟಿ ಮಾಡಿ ಎಲ್ಲವನ್ನು ದ್ವಂಸಗೊಳಿಸುವುದು. ಅವನನ್ನು ಇನ್ನೊಬ್ಬ ಬಲಿಷ್ಠ ದ್ವಂಸಗೊಳಿಸುವುದು. ಇದು ಪ್ರಪಂಚದ ಎಲ್ಲಾ ಭಾಗಗಳಲ್ಲಿ ನೆಡದಿರುವ ಸಂಗತಿಗಳಾಗಿವೆ. ಆದರೆ ಈ ಕತೆಯ ನಜರೇತಿ ಹಳ್ಳಿಯ ಜನರು ಸ್ವಾರ್ನಿಯಾರ್ಡರ ದಾಳಿಯಿಂದ ಅನುಭವಿಸುವ ಸಾವು ನೋವುಗಳನ್ನು ಕಣ್ಮಂದೆ ಮೂಢಿಸಿದ್ದಾರೆ. ಹೊಲ ತೋಟಗಳಿಗೆ ಬೆಂಕಿಯಿಟ್ಟು, ಕುರಿ, ದನಕರುಗಳನ್ನು ವಶಪಡಿಸಿಕೊಂಡು, ಸಿಕ್ಕ ಸಿಕ್ಕವರನ್ನು ಸಾಯಿಸಿದ ಸ್ವಾರ್ನಿಯಾರ್ಡರನ್ನು ನಜರೇತಿ ಜನರು ಸಾಯಿಸುತ್ತಾರೆ. ಇದರ ಪ್ರತಿಯಾಗಿ ದಾಳಿ ಮಾಡಿದ ಸ್ವಾರ್ನಿಯಾರ್ಡರು ನಚರೇತಿಯ ಪುಟ್ಟ ಪುಟ್ಟ ಕಂದಮ್ಮಗಳನ್ನು ಬಲಿ ತೆಗೆದು ಕೊಳ್ಳುವ ದೃಶ್ಯಗಳು ನಿಜಕ್ಕೂ ಸಹಿಸಲಸಾಧ್ಯವಾಗಿವೆ. ಜನರ ಅಸಹಾಯಕತೆ, ದು:ಖ, ನೋವು, ಅಂಗಲಾಚನೆ, ಹಳ್ಳಿಯ ಸನ್ನಿವೇಶವನ್ನು ಬರಹದಲ್ಲಿ ಒಡಮೂಢಿಸಿದ್ದಾರೆ.