ಹುಟ್ಟಿನಿಂದಲೇ ಅಂಗವಿಕಲೆಯಾದ ಹುಡುಗಿ ತಾನು ಜೀವನದಲ್ಲಿ ಅನುಭವಿಸುವ ಮತ್ತು ತನ್ನ ಸುತ್ತಮುತ್ತಲಿನ ಜನರು ಅನುಭವಿಸುವ ಯಾತನೆ, ಮಾನಸಿಕ ಸ್ಥಿತಿಯನ್ನು ಇದರಲ್ಲಿ ತಿಳಿಸಿದ್ದಾರೆ. ಸಮಾಜದಲ್ಲಿ ಇಂತಹ ವ್ಯಕ್ತಿಗಳನ್ನು ಜನರು ತಮಗರಿವಿಲ್ಲದೇ ಭಿನ್ನವಾಗಿ ನೋಡುತ್ತಾರೆ. ನೊಂದ ವ್ಯಕ್ತಿಗಳ ಬಗ್ಗೆ ಬರೆಯುವ ಕಾಯ್ಕಿಣಿಯವರ ಕತೆಗಳಲ್ಲಿ ಇದು ಒಂದು ಅಪರೂಪದ ಕತೆಯಾಗಿದೆ.