ಜಿ.ಪಿ.ರಾಜರತ್ನಂರವರು ಡಿಸೆಂಬರ್ ೫, ೧೯೦೪ರಲ್ಲಿ ರಾಮನಗರದಲ್ಲಿ ಜನಿಸಿದರು. ಇವರು ಮೂಲತ: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯವರು. ತಂದೆ ಜಿ. ಪಿ. ಗೋಪಾಲಕೃಷ್ಣ ಅಯ್ಯಂಗಾರ್. ಬಾಲ್ಯದಲ್ಲೇ ತಾಯಿಯನ್ನು ಕಳೆದುಕೊಂಡ ರಾಜರತ್ನಮ ಅಜ್ಜಿಯ ಅಕ್ಕರೆಯಲ್ಲಿ ಬೆಳೆದರು. ಗುಂಡ್ಲು ಪಂಡಿತ ವಂಶಕ್ಕೆ ಸೇರಿದ ಇವರಿಗೆ ಜಿ.ಪಿ. ರಾಜಯ್ಯಂಗಾರ್ ಎಂದು ನಾಮಕರಣ ಮಾಡಿದ್ದರು. ಲೋಯರ್ ಸೆಕೆಂಡರಿ ಓದುವಾಗ ಶಾಲೆಯ ಗುಮಾಸ್ತರಿಂದ ತನ್ನ ಹೆಸರನ್ನು ಜಿ.ಪಿ.ರಾಜರತ್ನಂ ಎಂದು ತಿದ್ದಿಕೊಂಡಿದ್ದರು. ೧೯೩೧ರಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು (ಎಂ.ಎ) ಪಡೆದರು. ಭ್ರಮರ ಎಂಬ ಕಾವ್ಯನಾಮದಲ್ಲಿ ರನ್ನನ ಪದಗಳನ್ನು ರಚಿಸಿದರು. ಇನ್ನು ಕೆಲಸ ಸಿಕ್ಕಿರದ ಸಂದರ್ಭದಲ್ಲಿ ೧೯೩೨ರಲ್ಲಿ ಇವರ ತಂದೆ ಅನಾರೋಗ್ಯಕ್ಕೆ ತುತ್ತಾದಾಗ ಬದಲಿ ಶಿಕ್ಷಕರಾಗಿ ತಂದೆಯ ಶಾಲೆಗೆ ಹೋದರು. ಮಾಧ್ಯಮಿಕ ೨ನೇ ತರಗತಿಯ ಮಕ್ಕಳಿಗೆ ಪದ್ಯ ಹರಿ ಭಕ್ತಿ ಸಾರ ಹೇಳಿಕೊಟ್ಟು ಬಂದರು. ಪಠ್ಯದಲ್ಲಿ ಇದ್ದ ಪಾಠ, ಪದ್ಯಗಳನ್ನು ನೋಡಿ ಇದನ್ನು ಮಕ್ಕಳು ಹೇಗೆ ಕಲಿಯಲು ಸಾಧ್ಯವೆನಿಸಿತು. ಅಂದು ಸಂಜ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನ ಸ್ನಾನ ಘಟ್ಟದಲ್ಲಿ ಕಾಲು ಚಾಚಿ ಕುಳಿತು ಕೊಂಡಾಗ ಮಕ್ಕಳಿಗೆ ಇಷ್ಟ ಆಗುವ ಹಾಗೆ ಏನಾದರೂ ಬರಿಯಬೇಕೆನಿಸಿತು. ಆಗ ಬರೆದಿದ್ದೆ ಬಣ್ಣದ ತಗಡಿನ ತುತ್ತೂರಿ. ಹೀಗೆ ಶಿಶು ಗೀತೆಗಳ ರಚನೆ ಪ್ರಾರಂಭವಾಯಿತು.
ಲಲಿತಮ್ಮ ಇವರ ಮೊದಲ ಪತ್ನಿ. ಇವರ ಅನಾರೋಗ್ಯದಿಂದ ತೀರಿಕೊಂಡಾಗ ಸೀತಮ್ಮ ನವರು ಅವನ ಸ್ಥಾನವನ್ನು ತುಂಬಿದರು. ೧೯೩೪ರಲ್ಲಿ ಕನ್ನಡ ಪಂಡಿತ ಹುದ್ದೆ ದೊರಕಿತು. ಮೈಸೂರು, ಬೆಂಗಳೂರು, ಶಿವಮೊಗ್ಗ, ತುಮಕೂರುಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದರು. "ರತ್ನನ ಪದಗಳು" ಇವರ ವಿಶಿಷ್ಟ ಕೊಡುಗೆ. ಒಬ್ಬ ಕುಡುಕನ ನೋವು, ಒಲವು, ಗೆಲವು, ಸೋಲು, ಎಲ್ಲವೂ ಅಡಗಿವೆ. ಹಲವು ಪ್ರಕಾರಗಳಲ್ಲಿ ಸುಮಾರು ೨೯೫ ಗ್ರಂಥಗಳನ್ನು ರಚಿಸಿರುವ ರಾಜರತ್ನಂ ರವರು ೧೯೨೬ರಲ್ಲಿ ದಕ್ಷಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನ ಮತ್ತು ಶಿವಮೊಗ್ಗ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು. ೧೯೬೯ರಲ್ಲಿ 'ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ' ದೊರೆಯಿತು. ೧೯೭೭ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವಿ ಲಭಿಸಿತು. ೧೯೭೯ರಲ್ಲಿ ಧರ್ಮಸ್ಥಳ ಸಾಹಿತ್ಯ ಸಮ್ಮೇಳನದಲ್ಲಿ ಮಕ್ಕಳ ಸಾಹಿತ್ಯ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.
ತುತ್ತೂರಿ, ರತ್ನನ ಪದಗಳು, ಎಂಡಕುಡುಕ ರತ್ನ, ನಾಗನ ಪದಗಳು, ಬುದ್ಧನ ಜಾತಕಗಳು, ಧರ್ಮದಾನಿ ಬುದ್ದ, ಕಡಲೆಪುರಿ, ಕಂದನ ಕಾವ್ಯಮಾಲೆ ಮೊದಲಾದವುಗಳು ಇವರ ಪ್ರಮುಖ ಕೃತಿಗಳಾಗಿವೆ. 'ಸಾಹಿತ್ಯ ಪರಿಚಾರಕ ಎಂದು ತಮ್ಮನ್ನು ತಾವೇ ಕರೆದುಕೊಳ್ಳುತ್ತಿದ್ದ ರಾಜರತ್ನಂ ರವರು ೧೯೭೯ ಮಾರ್ಚ್ ೧೩ ರಂದು ನಿಧನರಾದರು.
ಹಾಸ್ಯ ಘಟನೆಗಳು: