ಚಿಂದಿ ಬಟ್ಟೆಯನ್ನು ಹುಟ್ಟು, ತಲೆ ಕೆದರಿಕೊಂಡ ಸ್ನಾನ ಕಾಣದ ವ್ಯಕ್ತಿ ನಿಮ್ಮ ಮುಂದೆ ಬಂದು ನಿಂತರೆ ಏನೆನ್ನುದ್ದುಕೊಳ್ಳುವಿರಿ? ಅಯ್ಯೋ ಯಾರೊ ಹುಚ್ಷನಿರಬೇಕು? ಕಳ್ಳನಿರಬೇಕು?..... ಹೀಗೆ ನೂರೆಂಟು ಆಲೋಚನೆಗಳು ಕಣ್ಣ ಮುಂದೆ ನಿಲ್ಲುತ್ತವೆ...... ನಮ್ಮ ಸಮಾಜದಲ್ಲಿ ನಾವು ಹಾಕಿಕೊಳ್ಳುವ ಬಟ್ಟೆಯ ಮೇಲೆ ನಮ್ಮ ಸ್ಥಿತಿಯ ನಿರ್ಧಾರವಾಗುತ್ತದೆ. ಯಾರಾದರೂ ಒಬ್ಬರ ವಸ್ತುವನ್ನು ಕದ್ದರೆ ಕದ್ದ ವಸ್ತುವನ್ನು ದೊರಕಿಸಿ ಕೊಡಲು ಪ್ರಯತ್ನಿಸುತ್ತಾರೆ. ಅದೇ ಆಹಾರವನ್ನು ಕದ್ದರೆ....... ತಿನ್ನುವ ಅನ್ನವನ್ನು ಕದಿಯುವ ವ್ಯಕ್ತಿಗೆ ವ್ಯಕ್ತವಾಗುವ ಅಭಿಪ್ರಾಯಗಳೇನು? ಯಾರ ಅನ್ನವನ್ನು ಯಾರು ಕದಿಯುತ್ತಾರೆ........