ಕೊಡಗಿನ ಗೌರಮ್ಮನವರ ಕತೆಗಳಲ್ಲಿ ಇತ್ತಿಚೆಗೆ ಓದಿದ ಕತೆ ಒಂದು ಚಿತ್ರ. ಒಬ್ಬರನ್ನೊಬ್ಬರು ನೋಡದೇ, ಮಾತಾನಾಡದೇ ಮದುವೆಯಾಗುವ ಕಾಲದ ಹೆಣ್ಣಿನ ಕತೆ. ಮದುವೆಯಾದರೆ ಮಾತ್ರ ಮಗನನ್ನು ವಿದೇಶಕ್ಕೆ ಕಳುಹಿಸುವುದೆಂದು ಷರತ್ತು ಹಾಕಿದ ಅಪ್ಪನ ಒತ್ತಾಯಕ್ಕೆ ಮಣಿದು ಮದುವೆ ಒಪ್ಪಿಕೊಳ್ಳುವ ವರನ ಮುಂದೆ ಇರುವುದು ಕೇವಲ ಅವನ ಮುಂದಿನ ವಿದ್ಯಾಭ್ಯಾಸವೇ ಹೊರತು ಮದುವೆ ವಧು ಅಲ್ಲ. ಮದುವೆಯಲ್ಲೂ ಕೂಡ ಒಬ್ಬರ ಮುಖ ಒಬ್ಬರು ನೋಡುವುದಿಲ್ಲ. ನಿಜ ವಿಷಯ ತಿಳಿದ ಮಧು ಕುಪಿತದಿಂದ ನೆಪಮಾತ್ರ ಪತಿಯನ್ನು ದ್ವೇಷಿಸುತ್ತಾಳೆ. ಸುಶಿಕ್ಷಿತ ವಧು ಇದನ್ನು ಮದುವೆಯೇ ಅಲ್ಲವೆನ್ನುತ್ತಾಳೆ. ೪ ವರ್ಷಗಳ ನಂತರ ಹೊಸಬನ ಪರಿಚಯವಾಗುತ್ತದೆ, ಆತ್ಮಿಯತೆ ಬೆಳೆಯುತ್ತದೆ. ಅದೇ ಸಮಯಕ್ಕೆ ಪತಿಯಾದವನು ಮರಳಿ ಬರುತ್ತಾನೆ.?!!!! ಇಂತ ಸಂಧರ್ಬದಲ್ಲಿ ಅವಳ ನಿರ್ದಾರವೇನು? !!!!
ಲೇಖಕಿಯು ತುಂಬಾ ಚೊಕ್ಕವಾಗಿ ಕತೆಯನ್ನು ಮೂಢಿಸಿದ್ದಾರೆ. ಸಿನಿಮೀಯ ರೂಪದಲ್ಲಿ ಕತೆ ಮುಕ್ತಾಯವಾಗುತ್ತದೆ.