ಮರೆಯಾದ ಮಾರಮ್ಮ ಮತ್ತು ಇತರ ಕತೆಗಳು ಎಂಬ ಕಥಾಸಂಕಲನದಿಂದ ಈ ಕತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ದೇವರಲ್ಲಿ ನಂಬಿಕೆ ಇಲ್ಲದ ವ್ಯಕ್ತಿಯ ಜೀವನದಲ್ಲಿ ನೆಡೆಯುವ ಒಂದು ಘಟನೆಯನ್ನು ಇದರಲ್ಲಿ ತಿಳಿಸಿದ್ದಾರೆ. ಕಾಕತಾಳೀಯ ಎಂಬಂತೆ ಜರುಗುವ ಪ್ರಸಂಗಗಳಿಗೆ ದೇವರೇ ಕಾರಣ ಎಂದು ನಂಬುವ ಹಳ್ಳಿಯ ಜನರ ಎದುರಿಗೆ ಗರ್ವದಿಂದ ಹೇಳಿಕೊಂಡಿದ್ದ ನಾಯಕನ ಮಾತುಗಳಿಗೆ ತಕ್ಕ ಶಾಸ್ತಿಯಾಯಿತೆಂದು ಅಂದುಕೊಳ್ಳುವುದೇ ಕಥಾ ಶೀರ್ಷಿಕೆಯಾಗಿದೆ!