ಹಣದ ಮೂಲಕ ವ್ಯಕ್ತಿಗಳನ್ನು ಅಳೆಯುವುದು ಸಾಮಾನ್ಯ. ೬ ಗಂಟೆ ಆಚೆ ಹೋಗಿ ದುಡಿಯುವ ಮಹಿಳೆಯರಿಗೆ ಸಿಗುವ ಗೌರವಕ್ಕೂ , ಮನೆಯಲ್ಲಿ ಸಮಯದ ಲೆಕ್ಕವಿಡದೆ ದುಡಿಯುವ ಮಹಿಳೆಯರಿಗೆ ಕೊಡುವ ಗೌರವಕ್ಕೂ ತುಂಬಾ ವ್ಯತ್ಯಾವಿದೆ. ಕೆಲವೊಮ್ಮೆ ಹಣದ ಎದುರು ಎಲ್ಲಾ ಮಾನವೀಯತೆಗಳು ಗೌಣವಾಗುತ್ತವೆ. ಆದರೆ ಒಮ್ಮೆಯಾದರೂ ಇವುಗಳಿಗೆ ಮಾನ್ಯತೆ ದೊರೆಯುತ್ತದೆ ಎಂಬುದನ್ನು ಅನ್ನಪೂರ್ಣರವರು ಚಿಕ್ಕ ಚೊಕ್ಕವಾಗಿ ತಿರುಗು ಬಾಣದಲ್ಲಿ ತಿಳಿಸಿದ್ದಾರೆ.