ಕಲ್ಪನೆಯಲ್ಲ ಇದು ಬದುಕು. ತಮ್ಮ ಜೀವನದ ಅನೇಕ ಘಟನೆಗಳನ್ನು ` ನನ್ನ ಪ್ರೀತಿಯ ಹುಡುಗಿಗೆ' ಪತ್ರಗಳ ಬರೆಯುವ ಮೂಲಕ ತೆರೆದಿಟ್ಟಿದ್ದಾರೆ. ಬದುಕು ಕಲ್ಪನೆಯಲ್ಲ ತಾವು ಸೃಷ್ಟಿಸಿಕೊಂಡ ಹುಡುಗಿಯೊಂದಿಗೆ ತಾವು ಕಂಡ, ಅನುಭವಿಸಿದ ಜೀವನಕ್ಕೆ ಒಂದು ಚೌಕಟ್ಟನ್ನು ಹಾಕಿ ಹಂಚಿಕೊಂಡಿರುವುದು ಅದ್ಬುತ ಕಲ್ಪನೆ.
ನಾಗತಿಹಳ್ಳಿ ಚಂದ್ರಶೇಖರ್ ರವರು ನನಗೆ ಪರಿಚಯವಾಗಿದ್ದು ಅಮೆರಿಕಾ ಅಮೆರಿಕಾ ಚಿತ್ರದ ನಿದರ್ೇಶಕರಾಗಿ, ನಂತ್ರ ಕಂಡಿದ್ದು ನಿದರ್ೇಶಕರಾಗಿಯೇ. ಸಿನಿಮಾ ಪ್ರಪಂಚ ಮತ್ತು ಅದಕ್ಕೆ ಸಂಬಂಧಪಟ್ಟ ವ್ಯಕ್ತಿಗಳ ಬಗ್ಗೆ ಅಷ್ಟೇನೂ ಆಸಕ್ತಿ ಇಲ್ಲದಿರುವುದು ಗ್ರಂಥಾಲಯದಲ್ಲಿ ಇವರ ಪುಸ್ತಕ ಕಣ್ಣಿಗೆ ಬಿದ್ದರೂ ಕೆಗೆತ್ತಿಕೊಂಡಿರಲಿಲ್ಲ. ಆದರೆ ಕೊನೆಗೂ ಇವರ ಪುಸ್ತಕ ಮನೆಗೆ ಬಂತು. ಅನಾಸಕ್ತಿಯಿಂದಲೇ ನೋಡೋಣ ಹೇಗಿದೆಯೆಂದು ಕೈಗೆತ್ತಿಕೊಂಡಾಗ ಅವರ ಜೀವನದ ಒಂದು ಮಗ್ಗಲಿನ ಪರಿಚಯವಾದಂತಾಯಿತು. ನನಗೆ ಇವರ ಜೀವನದ ಅನೇಕ ಘಟನೆಗಳು ಕನಿಕರ, ಸಂತೋಷ, ಅನುಕಂಪಗಳನ್ನು ಮೂಢಿಸಿವೆ.
ಇವರ ಕಾಲೇಜಿನ ದಿನಗಳು, ರಾತ್ತಿ ಪಾಳೆಯ ದುಡಿತ, ಸ್ನೇಹಿತರು, ಶಂಕರ ಮೋಕಾಶಿಯಂತ ಗುರುಗಳ ಜೋತೆಗೆ ನೆನಪಾಗುವುದು ಡೈರಿಯಲ್ಲಿನ ನಾಯಿಯ ಅವಾಂತರ. ಈಗ ನೆನಪಾದರೂ ಹಾಲು, ಕಾಫಿ ಟೀ ಯಾವುದು ಬೇಡವೆನಿಸುತ್ತದೆ. ಆದರೆ ಬೆಂಗಳೂರಂತ ನಗರಗಳಲ್ಲಿ ನಾವೆಲ್ಲ ಅನುಭವಿಸಲೇ ಬೇಕಾದ ಅನಿವಾರ್ಯ. ಹಾಲಿನ ಅಂಗಡಿಯ ಮುಂದೆ ಹಾಲು ತೆಗೆದುಕೊಳ್ಳುವಾಗ ಒಮ್ಮೆ ಚಿತ್ತದಲ್ಲಿ ಸುಳಿಯದೇ ಬಿಡುವುದಿಲ್ಲ!
ಇವರ ಜೀವನದ ಅನೇಕ ಘಟನೆಗಳಲ್ಲಿ ಆದರ್ಶಪ್ರಾಯವಾದ ವಿಷಯವೆಂದರೆ ಮದುವೆಯ ಸಂದರ್ಭ. ತುಂಬಾ ಸರಳವಾಗಿ ವಿಶೇಷವಾಗಿ ದಾಂಪತ್ಯ ಜೀವನವನ್ನು ಆಯ್ದುಕೊಂಡಿದ್ದಾರೆ. ಅದರೊಂದಿಗೆ ಕೇವಲ ಪ್ರತಿಷ್ಢೆ, ಒಣಪ್ರದರ್ಶನಗಳು ಎಲ್ಲೆಲ್ಲು ಕಂಡು ಬರುವಂತೆ ಅಮೆರಿಕಾದಲ್ಲಿ ಸ್ಪಲ್ಪ ಹೆಚ್ಚಾಗಿಯೇ ಕಂಡು ಬಂದಿದ್ದು, ಅಲ್ಲೂ ಕೂಡ ನಿಸ್ವಾರ್ಥ ವ್ಯಕ್ತಿಗಳನ್ನು ಗುರುತಿಸಿದ್ದು ಅಮೆರಿಕಾ ಕನ್ನಡ ಸಮ್ಮೇಳನದಲ್ಲಿನ ಸಂಗತಿಯಲ್ಲೊಂದು. ಚಂದ್ರಶೇಖರ್ ರವರು ತುಂಬಾ ಪುಣ್ಯಮಾಡಿದ್ದಾರೆ. ಯಾಕೆಂದರೆ ಇವರಿಗೆ ಸಿಕ್ಕಿರುವ ಎಲ್ಲಾ
ಮನೆ ಮಾಲಿಕರು ತುಂಬಾ ಒಳ್ಳೆಯವರು?!
ಅದರೊಂದಿಗೆ ಇವರ ಸಿನಿಮಾ ಜಗತ್ತಿನ ಅನೇಕ ವಿಷಯಗಳು, ವೈಯಕ್ತಿಕ ಜೀವನದ ಕೆಲವು ಅಂಶಗಳು, ಕೆಲವಾರು ವಿಷಯಗಳ ಮೇಲಿನ ಅಭಿಪ್ರಾಯಗಳು, ಅನೇಕ ಅನುಭವಗಳು. . . . . . . . .
ನಾನು ಓದಿರುವುದು ನನ್ನ ಪ್ರೀತಿಯ ಹುಡುಗಿಯ 2ನೇ ಸಂಪುಟ. ಇದು ನಾಗತಿಹಳ್ಳಿ ಚಂದ್ರಶೇಖರನ್ನು ಸ್ವಲ್ಪ ಮಟ್ಟಿಗೆ ತಿಳಿಸಿಕೊಟ್ಟಿದೆ. ಇನ್ನು ತಿಳಿಯುಲು ಸಂಪುಟ 1ನ್ನು ಓದಬೇಕಾಗಿದೆ.