ಸಾವು ಯಾರಿಗೂ ನಿಶ್ಷತವಲ್ಲ. ಆದರೆ ಸಾಯುವುದಂತು ಖಂಡಿತ. ಇದು ಇಂತಹ ಸಮಯದಲ್ಲೇ, ಹೀಗೆ ಬರುತ್ತದೆಂದು ಹೇಳಲು ಬರುವುದಿಲ್ಲ. ಆದರೆ ಸೈನಿಕರಿಗೆ?!........ ಶತ ಶತಮಾನಗಳಿಂದ ರಕ್ಷಣಾ ಕಾರ್ಯದಲ್ಲಿ ನಿರತರಾಗಿ, ಸಾವನ್ನೇ ತಮ್ಮ ಮಡಿಲಲ್ಲಿ ಕಟ್ಟಿಕೊಂಡು ಓಡಾಡುವವ ಇವರು ಯಾವುದೇ ಕಾರಣಕ್ಕೆ ಸೈನ್ಯವನ್ನು ಸೇರಿರಬಹುದು. ದೇಶಭಕ್ತಿ ಒಂದೆಡೆಯಾದರೆ, ಇನ್ನು ಕೆಲವರಿಗೆ ಅನಿವಾರ್ಯತೆ. ಸಾವನ್ನಪ್ಪಿದ ಯೋದನಿಗೆ ಆ ಕ್ಷಣದಲ್ಲಿ ಸ್ವಲ್ಪ ಸಂತಾಪ, ಸ್ವಲ್ಪ ಧನಸಹಾಯ, ಬೀದಿಯಲ್ಲೊಂದು ಪ್ರತಿಮೆ!! ಈ ಪ್ರತಿಮೆ ಕೇವಲ ಒಬ್ಬ ವ್ಯಕ್ತಿಯ ಪ್ರತೀಕವಲ್ಲ. ಅದು ಯುಗಯುಗಗಳ ಕತೆಯನ್ನು ತಿಳಿಸಿಕೊಡುವ ದ್ಯೋತಕ ಎಂಬುದನ್ನು ಬ್ರೆಕ್ಟ್ ರವರು ಚಿಕ್ಕದಾಗಿ, ಮನಮುಟ್ಟುವಂತೆ ಈ ಕತೆಯಲ್ಲಿ ತಿಳಿಸಿದ್ದಾರೆ. ಅಷ್ಟೇ ಚೆನ್ನಾಗಿ ಎಚ್. ಕೆ. ರಾವಚಂದ್ರಮೂರ್ತಿಯವರು ಅನುವಾದಿಸಿದ್ದಾರೆ.