ಚಿತ್ರದುರ್ಗದ ಗುಡ್ಡದ ರಂಗಪ್ಪನ ಹಳ್ಳಿಯಲ್ಲಿ ೧೯೩೭ರಲ್ಲಿ ಜನಿಸಿದ ವೈಕುಂಠರಾಜುರವರು ತುಮಕೂರಿನಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದರು. ೧೯೬೨ ರಲ್ಲಿ 'ತಾಯಿನಾಡು' ಪತ್ರಿಕೆಯಲ್ಲಿ ಕೆಲಸ ಕೈಗೊಂಡು ೧೯೬೪ರಲ್ಲಿ 'ಪ್ರಜಾವಾಣಿ'ಯ ಸಾಪ್ತಾಹಿಕ ಪುರವಣಿಯ ಸಂಪಾದಕರಾಗಿ ಕಾರ್ಯನಿರ್ವಹಿಸಿದರು. ಅನಂತರ ಸ್ವಂತವಾಗಿ 'ವಾರಪತ್ರಿಕೆ' ಮತ್ತು ಇನ್ನೆರಡು ಪತ್ರಿಕೆಗಳ ಸ್ಥಾಪಕ ಸಂಪಾದಕರಾದರು.
ಕಾದಂಬರಿಗಳು : ಅಂತ್ಯ, ಆಕ್ರಮಣ, ಉದ್ಭವ, ಪರ್ಯಟನ, ವಿಮರ್ಶೆ, ಸ್ವಂದನ
ಜೀವನ ಚರಿತ್ರೆ : ಟೀಯೆಸ್ಸಾರ್, ಗುಬ್ಬಿ ವೀರಣ್ಣ, ಡಿ.ಎಲ್.ನರಸಿಂಹಾಚಾರ್
ನಾಟಕ : ಸಂದರ್ಭ, ಸನ್ನಿವೇಶ.
ಇವರು 'ಉದ್ಭವ' ಕಾದಂಬರಿಗೆ 'ವರ್ಧಮಾನ ಪ್ರಶಸ್ತಿ', ಪತ್ರಿಕೋದ್ಯಮದಲ್ಲಿನ ಸೇವೆಗೆ 'ಟಿಯಸ್ಸಾರ್ ಪ್ರಶಸ್ತಿ' ಗಳನ್ನು ಪಡೆದಿದ್ದಾರೆ.
ಓದಿರುವ ಕತೆಗಳು :