ನಮ್ಮಲ್ಲಿ ಅನೇಕ ಜಾತಿ, ಮತಗಳು, ಧರ್ಮಗಳು ಮನೆಮಾಡಿಕೊಂಡಿವೆ. ಈ ದಿನಗಳಲ್ಲೂ ಕೂಡ ನಮ್ಮ ಜನರು ಅದಕ್ಕೆ ಜೋತು ಬಿದ್ದು ಅನೇಕ ಜೀವಗಳನ್ನು ಬಲಿತೆಗೆದು ಕೊಂಡಿರುವ ಅನೇಕ ಘಟನೆಗಳು ನಮ್ಮ ಸುತ್ತು ಮುತ್ತ ನೆಡೆದಿವೆ. ಮತ್ತು ನೆಡೆಯುತ್ತಲಿವೆ. ಹಣದಾಸೆಗಾಗಿ ಮಹಿಳೆಯರನ್ನು ಬಲಿಕೊಟ್ಟು ಅವರ ಜೀವನವನ್ನು ನರಕಕೂಪದಲ್ಲಿ ತಳ್ಳಿ ಆರಾಮವಾಗಿ ಜೀವನ ಸಾಗಿಸುತ್ತಿರುವ ಜನರು ನಮ್ಮಲ್ಲಿ ಎಲ್ಲಾ ಕಡೆ ಸಿಗುತ್ತಾರೆ. ಇವರ ಕೈಗೆ ಸಿಕ್ಕು ಅನೇಕ ಕಷ್ಟಗಳನ್ನು ಅನುಭವಿಸಿ ಅದರಿಂದ ಆಚೆ ಬರುವ ಮಹಿಳೆಯನ್ನು ನಮ್ಮ ಸಮಾಜ ಸ್ವೀಕರಿಸುತ್ತದೆಯೇ?........................ ಅವರಿಗೂ ಬಾಳಲು ಅವಕಾಶ ಕೊಡುತ್ತದೆಯೇ?...........
ಹೀಗೆ ಬಂದ ಮಹಿಳೆಯನ್ನು ತನ್ನ ಸ್ವಂತ ಮನೆಯವರು ನಡಿಸಿಕೊಳ್ಳುವ ಕತೆಯೇ ಇದಾಗಿದೆ.