ಕತೆಯ ಶೀರ್ಷಿಕೆಯನ್ನು ಓದಿದಾಗ ಇದೇನು ಹೀಗಿದೆ ಎನಿಸಿತು. ಅದನ್ನು ವ್ಯಕ್ತಿಯ ಹೆಸರನ್ನಾಗಿ ಬಳಸಿದ್ದಾರೆಂದು ತಿಳಿಯಿತು. ಹಸಿವು ಎನ್ನುವುದನ್ನು ಗೆಲ್ಲುವುದು ತುಂಬಾ ಕಷ್ಟ. ನೋವನ್ನು ಸಹಿಸಬಹುದು ಆದರೆ ಹಸಿವವನ್ನು????? ಉಳ್ಳವರು ಇಲ್ಲದವರು ಎಂಬಲ್ಲಿ ಕಷ್ಟಗಳು, ಅಪಮಾನ , ಅವಮಾನ, ಹಿಂಸೆ, ತುಳಿತಗಳು, ನೋವುಗಳೆಲ್ಲವೂ ಇಲ್ಲದವರಿಗೆನೇ. ಲೇಖಕರು ಇಡೀ ಸಾಮಾಜಿಕ ಬದುಕಿನ ಚಿತ್ರಣವನ್ನು ಈ ಕತೆಯಲ್ಲಿ ಮೂಢಿಸಿದ್ದಾರೆ. ಒಂದು ಯಕಚ್ಚಿತ್ತ್ ನಾಯಿಗೆ ಇರುವ ಕರುಣೆ ಒಬ್ಬ ಮನುಷ್ಯನಿಗೆ ಇಲ್ಲ. ಕತ್ತಲ ಅನ್ನಕ್ಕಾಗಿ ಅಲೆದಾಡಿ ಕೊನೆಗೆ ಯಾವ ನಿರ್ಧಾರಕ್ಕೆ ಬಂದು ನಿಲ್ಲುತ್ತಾನೆ??? ಏನು ಮಾಡುತ್ತಾನೆ ????