ಹಳ್ಳಿ ಬದುಕಿನಲ್ಲಿ ಜೋಗುಳ, ಕತೆಯನ್ನು ಕೇಳುತ್ತಾ ಬೆಳೆದವರಿಗೆ ಮತ್ತೆ ಬಾಲ್ಯಕ್ಕೆ ಕರೆದೊಯ್ಯತ್ತದೆ. ತಲತಲಾಂತರಗಳಿಂದ ಬೆಳೆದು ಬಂದ ಕತೆ ಯಾವ ಕಾಲಕ್ಕೂ ಮುಗಿಯುವುದೇ ಇಲ್ಲ. ಅಜ್ಜ ಕೇಳಿದ ಕತೆಯನ್ನು ಅವನ ಮಗ, ಮೊಮ್ಮಗ, ಮರಿಮಕ್ಕಳು ಇಂದಿನವರೆಗೂ ಕೇಳುತ್ತಾ ಇದ್ದಾರೆ. ಮುಂದೆಯೂ ಅದೇ ಕತೆ ಮುಂದುವರೆಯುತ್ತದೆ....... ಇಂದಿನ ಜೀವನದಲ್ಲಿ ಮಕ್ಕಳಿಗೆ ಕತೆ ಹೇಳುವ ಪೋಷಕರು, ಕತೆ ಕೇಳುವ ಮಕ್ಕಳು ಇಲ್ಲವೇ ಇಲ್ಲ. ಇಂತಹ ಸಂಸ್ಕೃತಿ ಮರೆಯಾಗುತ್ತಿರುವುದು ಬೇಸರದ ಸಂಗತಿ.
ಈ ಕತೆಯಲ್ಲಿ ಅಜ್ಜ, ಮರಿಮಕ್ಕಳಿಗೆ ಜೋಗುಳ ಹಾಡುವಾಗ, ಕತೆ ಹೇಳುವಾಗ , ತಾನು ತನ್ನ ಬಾಲ್ಯಕ್ಕೆ ಮರಳುತ್ತಾನೆ. ಅದೇ ಮನೆಯಲ್ಲಿ ಎಂಭತ್ತು ವರ್ಷ ಕಳೆದಿರುವ ಅವರು ಪ್ರತಿಯೊಂದನ್ನು ಮಕ್ಕಳು ಬಳಸುವಾಗ ತಾವು ಬಳಸಿದ್ದನ್ನು, ಅನುಭವಿಸಿದ್ದನ್ನು ನೆನಪಿಸಿಕೊಳ್ಳುತ್ತಾರೆ.