ನಾವು ಕೇಳಿರುವ ಪ್ರಕಾರ, ನೋಡಿರಿವ ಪ್ರಕಾರ ಹದಿಹರೆಯದವರಿಗೆ ಹಿಂದಿನ ಕಾಲದವರ ಅಥವಾ ಹಿರಿಯರ ಹಿತನುಡಿಗಳು ಯಾವಾಗಲೂ ಕಹಿಯಾಗಿರುತ್ತವೆ. ಅವರ ಹೇಳುವ ಮಾತುಗಳಿಗೆ ಒಂದು ಹಿನ್ನಲೆಯಿರುತ್ತದೆ ಎಂದು ಯೋಚಿಸುವುದು ತುಂಬಾ ಕಡಿಮೆ. ಹಾಗಂತ ಎಲ್ಲಾ ಮಾತುಗಳು ಸರಿ ಎಂದೆಲ್ಲಾ. ಬದಲಾದ ಕಾಲ, ಸಮಾಜಕ್ಕೆ ತಕ್ಕಂತೆ ನಾವು ಬದಲಾಗ ಬೇಕಾಗುತ್ತದೆ.
ಅಜ್ಜಿಯ ಅಮ್ಮನ ಮಾತಿಗೆ ಸೊಪ್ಪು ಹಾಕದ ಹುಡುಗಿ, ಅಮ್ಮನು ಒಂದು ಹೇಳಿದ ಸತ್ಯಘಟನೆಯಿಂದ ಸ್ವತ: ಬದಲಾಗುವ ಕತೆ ಕಾಲ. ಕಾಲ ಎಲ್ಲವನ್ನೂ ಬದಲಾಯಿಸುತ್ತದೆ ಎಂಬ ಹಿನ್ನಲೆಯಲ್ಲಿ ಕತೆಯ ರಚನೆಯಾಗಿದೆ.