೧೯೨೮ ಸೆಪ್ಟಂಬರ್ ೧ ರಂದು ಜನನ. ಅನಸೂಯ ಶಂಕರ ಅವರ ಕಾವ್ಯನಾಮ ತ್ರಿವೇಣಿ. ಮೂಲತ: ಮೈಸೂರಿನವರಾದ ಅನುಸೂಯ ಮನ:ಶಾಸ್ತ್ರದಲ್ಲಿ ಪದವಿಪಡೆದರು. ಕನ್ನಡದಲ್ಲಿ ಮನೋವೈಜ್ಞಾನಿಕ ಹಿನ್ನೆಲೆಯ ವಸ್ತುಗಳನ್ನು ಆಯ್ದುಕೊಂಡು ಕಾದಂಬರಿಗಳನ್ನು ಬರೆದ ಮೊದಲಿಗರು. 'ಹೂವು ಹಣ್ಣು', 'ಅಪಸ್ವರ', 'ಅಪಜಯ', 'ಮುಚ್ಚಿದ ಬಾಗಿಲು' 'ಬೆಕ್ಕಿನ ಕಣ್ಣು' ಸೇರಿದಂತೆ ಹಲವು(೨೫) ಕಾದಂಬರಿಗಳನ್ನು ಬರೆದಿದ್ದಾರೆ. 'ಶರಪಂಚರ', 'ಹೂವುಹಣ್ಣು', 'ಬೆಳ್ಳಿಮೋಡ', 'ಹೆಣ್ಣಲೆ ಚಿಗುರಿದಾಗ', 'ಮುಕ್ತಿ' ಕಾದಂಬರಿಗಳು ಚಲನಚಿತ್ರಗಳಾಗಿವೆ. 'ಸಮಸ್ಯೆಯ ಮಗು', 'ಎರಡು ಮನಸ್ಸು', 'ಹೆಂಡತಿಯ ಹೆಸರು' ಇವರ ಕಥಾ ಸಂಕಲನಗಳು. ೧೯೬೦ ರಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿ (ಅವಳ ಮನೆ), ೧೯೬೨ ರಲ್ಲಿ ದೇವರಾಜ್ ಪ್ರಶಸ್ತಿಯನ್ನು (ಸಮಸ್ಯೆಯ ಮಗು) ಪಡೆದ ತ್ರಿವೇಣಿ ಜುಲೈ ೨೯, ೧೯೬೩ ರಲ್ಲಿ ತಮ್ಮ ೩೫ನೇ ಮಯಸ್ಸಿನಲ್ಲಿ ನಿಧನ ಹೊಂದಿದರು.