ಅರ್ಥವಾದರೆ ತಾನೇ ಮಣ್ಣು…..
ಒಂದು ತರಗತಿಗೆ ಅಂದು ಪ್ರಾಧ್ಯಾಪಕರು ಬರದಿದ್ದುದರಿಂದ, ತರಗತಿಯಲ್ಲಿ ಗದ್ದಲ ಪ್ರಾರಂಭವಾಗಿ ಅಕ್ಕಪಕ್ಕದ ತರಗತಿಗಳೂ ನಡೆಯಲಾರದಂತಹ ಸ್ಥಿತಿ ತಲುಪಿದಾಗ ಪ್ರಿನ್ಸಿಪಾಲರಾಗಿದ್ದ ಪಡುಕೋಣೆ ರಮಾನಂದರಾಯರೇ ‘ಇದೇನಿದು ಗಲಾಟೆ’ ಎಂದು ನೋಡಲು ಬಂದರು. ಇವರನ್ನು ನೋಡಿದ ಕೂಡಲೇ ವಿದ್ಯಾರ್ಥಿಗಳು ಎದ್ದುನಿಂತು ಗೌರವ ಸೂಚಿಸಿದರು. “ಲೆಕ್ಚರರ್ ಬರದಿದ್ದರೆ ಹೀಗೆ ಗಲಾಟೆ ಮಾಡುತ್ತಿದ್ದೀರಾ, ನಿಮ್ಮಷ್ಟಕ್ಕೆ ನೀವು ಓದಿಕೊಳ್ಳಬಹುದಿತ್ತಲ್ಲಾ” ಎಂದರು. ಆಗ ಕಿಡಿಗೇಡಿ ವಿದ್ಯಾರ್ಥಿಯೊಬ್ಬ “ಬಿಡಿ ಸರ್, ಏನು ಓದೋದು, ಓದಿದ್ದು ಅರ್ಥವಾದರೆ ತಾನೇ ಮಣ್ಣು” ಎಂದನಂತೆ.