ಮದುವೆಯಾದ ಮೇಲೆ , ಹೆಣ್ಣು ತಾಯಿಯಾಗಲೇ ಬೇಕು. ತಾಯ್ತನದ ಸುಖವನ್ನು ಅನುಭವಿಸದೇ ಆಕೆಯ ಜೀವನ ಸಾರ್ಥಕವಲ್ಲ ಎನ್ನುವುದು ಒಂದು ಮಾತಾದರೆ, ಹೆಣ್ಣು ತಾಯಿಯಾಗಲೇ ಬೇಕು ಇಲ್ಲದಿದ್ದರೆ ಅವಳ ತನ್ನ ಎಲ್ಲಾ ಸ್ಥಾನಮಾನಗಳನ್ನು ಕಳೆದುಕೊಳ್ಳುತ್ತಾಳೆ. ಗಂಡೋ ಹೆಣ್ಣೋ ಹೆರಲೇಬೇಕು ಇಲ್ಲದಿದ್ದರೆ ಅವಳು ಹೆಣ್ಣೆ ಅಲ್ಲ. ...ಎಂಬುದು ಇನ್ನೋಂದು ರೀತಿಯ ಮಾತು.. ಇಂದಿಗೂ ಈ ಮಾತುಗಳು ಜನರಲ್ಲಿ ಮರೆಯಾಗಿಲ್ಲ. ಮಗುವನ್ನು ಹೆರಲು ತಾಯಿಯೊಬ್ಬಳೇ ಹೊಣೆಯೇ, ಅದರಲ್ಲಿ ಗಂಡನ ಪಾತ್ರವಿಲ್ಲವೇ? ಮಗುವನ್ನು ಕೊಡಲಾಗದ ಗಂಡ? ಬಂಜೆ ಎಂಬ ಪಟ್ಟ ಹೊತ್ತ ಹೆಂಡತಿ? ಮಗನಿಗೆ ಇನ್ನೊಂದು ಮದುವೆ ಮಾಡಿ ಮತ್ತೊಬ್ಬ ಹೆಣ್ಣನ್ನು ಬಂಜೆ ಮಾಡಹೊರಟ ಅತ್ತೆ? ...???