ವಂಶ ಪಾರಂಪರ್ಯವಾಗಿ ಬಂದಿದ್ದ ಕುಲಕಸಬನ್ನು ಬಿಟ್ಟು ಸ್ವತ: ದುಡಿದು ತಿನ್ನುಲು ಮುಂದಾಗುವ ದಾಸಯ್ಯನ ಅಚಲ ದೃಢತೆ , ಶ್ರಮ ಮಾದರಿಯಾಗುತ್ತದೆ. ಆದರೆ ಕೊನೆಯಲ್ಲಿ ಅವನ ಶ್ರಮವೆಲ್ಲಾ ನೀರಿನಲ್ಲಿ ಹೋಮವಾಗುತ್ತದೆ. ವ್ಯಕ್ತಿ ಮತ್ತು ವ್ಯಕ್ತಿತ್ವಕ್ಕೆ ಈ ಸಮಾಜದಲ್ಲಿ ಬೆಲೆಯಿಲ್ಲವೇ ಎಂದೆನಿಸುತ್ತದೆ. ಕತೆಯ ಕಡೆ ಭಾಗ ಕೇಳುಗನ ಕಣ್ಣಲ್ಲಿ ನೀರೂರಿಸುತ್ತದೆ.