ಬೇರೆಯವರರೊಂದಿಗೆ ಕೆಟ್ಟದಾಗಿ ನೆಡೆದು ಕೊಳ್ಳದೇ ಇದ್ದರೂ, ಬದುಕಿರುವಾಗ ಅನೇಕ ಶಾಸ್ತ್ರ ಸಂಪ್ರದಾಯಗಳನ್ನು ನಂಬಿಕೊಂಡು ಅವುಗಳನ್ನು ಚಾಚೂ ತಪ್ಪದೇ ಪಾಲಿಸಿಕೊಂಡು ಬಂದಿರುವ ವ್ಯಕ್ತಿ, ಕೆಲವು ಶಾಸ್ತ್ರಗಳು ಬ್ರಾಹ್ಮಣರಿಗೆ ಮಾತ್ರ ಯೋಗ್ಯವಾದವು. ಅವುಗಳನ್ನು ಬೇರೆ ಜಾತಿಯವರಿಗೆ ಮಾಡಬಾರದು, ಅವುಗಳನ್ನು ಮಾಡಿಸಿಕೊಳ್ಳುವ ಯೋಗ್ಯತೆ ನಮ್ಮನ್ನು ಬಿಟ್ಟರೆ ಬೇರೆಯವರಿಗೆ ಸಲ್ಲುವುದಿಲ್ಲ. ನಾನು ಸತ್ತ ನಂತರವೂ ನನಗೆ ತಕ್ಕ ಕರ್ಮಗಳನ್ನು ಮಾಡಬೇಕು. ಇಲ್ಲವಾದಲ್ಲಿ ನನಗೆ ಸ್ವರ್ಗ ಪ್ರಾಪ್ತಿಯಾಗಲ್ಲ. ಕ್ರಮಬದ್ದ ವಿಧಿಗಳನ್ನು ಅನುಸರಿಸಿ ಅವುಗಳ ಮೂಲಕ ನನಗೆ ಮುಕ್ತಿಯನ್ನು ದೊರಕಿಸಬೇಕೆಂದು ಹಂಬಲಿಸುವವನು ಈ ಕತೆಯ ನಾಯಕ. ತನ್ನೂರನ್ನು ಬಿಟ್ಟು ಬೇರೆ ಯಾವುದೋ ಜಾಗದಲ್ಲಿ ತಾನು ಮತ್ತು ತನ್ನ ಜಾತಿಯವನಲ್ಲದ ತನ್ನ ಸ್ನೇಹಿತನೊಂದಿಗೆ ಒಂದೇ ದಿನದಂದು ಸಾಯುವ ಶಾಸ್ತ್ರಿಯನ್ನು, ಅವನ ಸ್ನೇಹಿತನ ಸನಿಹದಲ್ಲಿಯೇ ಶವಸಂಸ್ಕಾರವನ್ನು ಮಾಡಲಾಗುತ್ತದೆ.
ಇಲ್ಲಿ ಪ್ರೇತಗಳು ಅದಲು ಬದಲಾದವೇ? ಶಾಸ್ತ್ರಿ ಬಯಸಿದ್ದ ಎಲ್ಲಾ ಸಂಸ್ಕಾರಗಳನ್ನು ಅವನ ಮಕ್ಕಳು ಈಡೇರಿಸಿದರೇ? ಸಾಯುವ ಸಂದರ್ಭದಲ್ಲೂ ಪೂಜೆ ಪುನಸ್ಕಾರಗಳಿಗೆ ಒತ್ತು ಕೊಡುತ್ತಿದ್ದ ಶಾಸ್ತ್ರಿಗಳ ಕಡೆಯ ಆಸೆ ಈಡೇರಿತೇ? ಆದಂತಹ ಅಚಾತುರ್ಯವೇನು? ಇವೆಲವುಗಳಿಗೆ ಉತ್ತರವನ್ನು ಈ ಕತೆ ಒಳಗೊಂಡಿದೆ.