ಕರ್ನಾಟಕದ ಮಲೆನಾಡ ಪ್ರದೇಶದಲ್ಲಿ ಅಣೆಕಟ್ಟನ್ನು ಕಟ್ಟಲು ಯೋಜನೆಗಳು ಪ್ರಾರಂಭವಾದಾಗಿನ ಪ್ರಸಂಗವನ್ನು ಲೇಖಕರು ಈ ಕತೆಯಲ್ಲಿ ಚಿತ್ರಿಸಿದ್ದಾರೆ. ದೊಡ್ಡ ದೊಡ್ಡ ಯಂತ್ರಗಳನ್ನು, ಅವುಗಳು ಮಾಡುವ ಕೆಲಸಗಳನ್ನು ಕೇಳಿರದ ನೋಡಿರದ ಜನರ ಕುತೂಹಲ, ನಮ್ಮ ಊರಿನಲ್ಲೇ ಅಣೆಕಟ್ಟನ್ನು ಕಟ್ಟುತ್ತಾರೆ, ಇದರಿಂದ ನಮಗೆ ತುಂಬಾ ಅನುಕೂಲವಾಗುತ್ತದೆ. ಭವಿಷ್ಯದಲ್ಲಿ ಉತ್ತಮ ಜೀವನವನ್ನು ನೆಡೆಸಬಹುದು ಎಂದು ಕನಸನ್ನು ಕಾಣಲು ಶುರು ಮಾಡಿದ ಜನರಿಗೆ ಇದ್ದಕ್ಕಿದ್ದಂತೆ, ಆ ಕನಸಿರಲಿ, ಅವರ ಜೀವನವೇ ಇಲ್ಲಿ ದುಹ್ಸಾಧ್ಯ ಎಂದರೆ?! ಶ್ರೀಮಂತರ ಜಮೀನುಗಳನ್ನು ಉಳಿಸಲೊಸುಗ ಅಲ್ಲೇ ಹುಟ್ಟಿ ಬೆಳೆದ, ತಮ್ಮ ಪೂರ್ವಜರ, ತಮ್ಮಗಳೆಲ್ಲವನ್ನು ತೊರೆದು ಇಡೀ ಊರಗಳನ್ನೇ ಬಿಡಬೇಕಾದ ಪರಿಸ್ಥಿತಿಯನ್ನು ಎದುರಿಸುವ ಜನರ ಕತೆ ಇದಾಗಿದೆ.