ಒಬ್ಬರ ಜೀವನದಲ್ಲಿ ನೆಡೆಯುವ ಎಲ್ಲಾ ಘಟನೆಗಳನ್ನು ಇನ್ನೋಬ್ಬರು ತಿಳಿಯಲು ಸಾಧ್ಯವಾಗುವುದಿಲ್ಲ. ಆದರೆ ದಾಂಪತ್ಯದಲ್ಲಿ ಪರಸ್ವರ ಮುಚ್ಚುಮರೆಯಿರಬಾರದು, ಎಲ್ಲಾವಿಷಯಗಳು ತಿಳಿದಿರಬೇಕೆಂದು ಬಯಸುವುದು ಸರ್ವೆಸಾಮಾನ್ಯ ಮತ್ತು ಸಹಜನೂ ಕೂಡ. ಅದೇ ರೀತಿ ತನ್ನ ಹೆಂಡತಿಯ ಜೀವನದಲ್ಲಿ ನೆಡೆದಿರುವ, ಅವಳು ಅವನ ಬಳಿ ಹೇಳಿರದ ಸಂಗತಿಯನ್ನು ತಿಳಿಯುವ ಪ್ರಯತ್ನ ಮಾಡುತ್ತಾನೆ ಕತೆಯ ನಾಯಕ. ಅದನ್ನು ಯಾವ ರೀತಿ ತಿಳಿಯುತ್ತಾನೆ. ಅದರ ಪರಿಣಾಮವೇನು ಎಂಬುದೇ 'ಕೋ.ಚೆನ್ನಬಸಪ್ಪ' ನವರ 'ಆ ಕಥೆಯ ಹಿಂದೆ'.